Tuesday, June 25, 2024

ಪ್ರಾಯೋಗಿಕ ಆವೃತ್ತಿ

ಕೋವಿಡ್ ನಾಲ್ಕನೇ ಅಲೆಯಬಗ್ಗೆ ಅಮೇರಿಕಾ ವೈದ್ಯರು ಹೇಳಿದ್ದೇನು?

ದೆಹಲಿಯಲ್ಲಿ ಇತ್ತೀಚಿನ ದಿನದಲ್ಲಿ ಕೋವಿಡ್ ಓಮಿಕ್ರಾನ್ ಹೆಚ್ಚಾಗುತ್ತಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಬಲವಾಗಿರುವ BA.2.12 ಸ್ಟ್ರೈನ್, BA.2 ಗಿಂತ ಬೃಹತ್ ಪ್ರಮಾಣದಲ್ಲಿ ಹರಡುತ್ತಿರುವ ಫಿಲ್ಟರ್ ವೈರಸ್ ಎಂದು ಅಮೇರಿಕಾದ ತಜ್ಞರೇ ಹೇಳಿರುವುದು ಅಚ್ಚರಿಯಾಗಿದೆ. ಈ ವೈರಸ್ ಪ್ರಸ್ತುತ 8 ಬಾರಿ ರೂಪಾಂತರ ಹೊಂದಿರುವ ವೈರಸ್ ಆಗಿರಬಹುದು ಎಂದಿದ್ದಾರೆ.

ದೆಹಲಿಯಲ್ಲಿ ಬುಧವಾರದಂದು 1009 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಇದು ಒಂದು ದಿನದ ಹಿಂದೆಯೇ ಪ್ರತಿಶತ 60 ಪ್ರಮಾಣದಷ್ಟು ಹರಡಿದೆ ಎಂದು ಅಂದಾಜಿಸಿದ್ದಾರೆ. ಈ ವೈರಸ್ ಒಂದು ವಾರಕ್ಕೆ 30% ನಿಂದ 90% ವೇಗವನ್ನು ಕಂಡುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

ಒಮಿಕ್ರಾನ್ BA.2 ವೈರಸ್ ನ ವೇಗವು BA2.12.1 ವೈರಸ್ ಆಗಿ ರೂಪಾಂತರವಾಗುತ್ತಿದೆ. ಇದರ ವೇಗವು BA.2 ಗಿಂತ ಎರಡುವರೆ ಪಟ್ಟು ವೇಗದಲ್ಲಿ ಹೆಚ್ಚಾಗುತ್ತಿದೆ ಎಂದು ಪ್ರಖ್ಯಾತ ವೈದ್ಯ ಎರಿಕ್ ಟೂಪಲ್ ಅಭಿಪ್ರಾಯ ಪಟ್ಟಿದ್ದಾರೆ.

ವರದಿಯಾದ ಹೊಸ ಪ್ರಕರಣಗಳಲ್ಲಿ ಮೊದಲ ಐದು ರಾಜ್ಯಗಳೆಂದರೆ: ದೆಹಲಿ (1009), ಹರಿಯಾಣ (3103), ಉತ್ತರ ಪ್ರದೇಶ (1684), ಮಹಾರಾಷ್ಟ್ರ (1625) ಮತ್ತು ಮಿಜೋರಾಂ 103.

Related Articles

ಅತ್ಯಂತ ಜನಪ್ರಿಯ

error: Content is protected !!