Friday, April 19, 2024

ಪ್ರಾಯೋಗಿಕ ಆವೃತ್ತಿ

ಸಾಮಾಜಿಕ ಕಳಕಳಿ ಇದ್ದರೆ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸು

ಸಾಮಾಜಿಕ ಕಳಕಳಿ ಇದ್ದು ಸಮಾಜಕ್ಕೆ ಕೈಲಾದ ಅಳಿಲು ಸೇವೆ ಮಾಡಿದರೆ ಮಾತ್ರ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದು ಸಮಾಜಸೇವಕ ಮಧು ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ಸಮೀಪವಿರುವ ದೇವರಮಾದಹಳ್ಳಿ ಗ್ರಾಮದಲ್ಲಿ ದೇವರಮಾದಹಳ್ಳಿ ಬ್ರಿಗೇಡ್ ಟ್ರಸ್ಟ್ ವತಿಯಿಂದ ನಡೆದ ಬೈಸಿಕಲ್ ವಿತರಣಾ ಸಮಾರಂಭದಲ್ಲಿ ಅವರು ಮಾತಾಡಿದರು.

ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಲು ಇಂದಿನ ಪರಿಸ್ಥಿತಿ ಸ್ವಲ್ಪ ಕಷ್ಟವಾದರೂ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಸೆ ಪೋಷಕರಿಗೆ ಇದೆ. ಇಂತಹ ಸಂದರ್ಭದಲ್ಲಿ ನಾವುಗಳು ಸಮಾಜಕ್ಕೆ ಕೈಲಾದ ಅಳಿಲು ಸೇವೆ ಮಾಡುವ ಮುಖಾಂತರ ವ್ಯಾಸಂಗ ಮಾಡುತ್ತಿರುವ ಗ್ರಾಮಾಂತರ ಮಕ್ಕಳ ಶ್ರೇಯೋಭಿವೃದ್ಧಿಗೆ ಸಹಕಾರ ನೀಡುವುದರಿಂದ ತಕ್ಕ ಫಲ ಹಾಗೂ ಮನಶಾಂತಿ ದೊರೆಯುತ್ತದೆ ಎಂದರು.

ಗ್ರಾಮೀಣ ಮಕ್ಕಳ ಬದುಕು, ಶಿಕ್ಷಣ ಅಭಿವೃದ್ಧಿಗೊಳ್ಳಲು ನಮ್ಮ ಹುಟ್ಟೂರಿನ ಸೇವಾ ಸಂಸ್ಥೆಯ ಯುವಕರು ಮಾಡುತ್ತಿರುವ ಸಾಮಾಜಿಕ ಕಳಕಳಿಯ ಚಿಕ್ಕ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಮಂಜಣ್ಣ,ಗ್ರಾ.ಪಂ. ಸದಸ್ಯ ಸುರೇಶ್, ಗೋವಿಂದ, ತಿಮ್ಮಪ್ಪ, ಕೃಷ್ಣ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!