Friday, September 27, 2024

ಪ್ರಾಯೋಗಿಕ ಆವೃತ್ತಿ

ಕುಲಾಂತರಿ ತಳಿ ಆಹಾರದ ವಿರುದ್ದ ಹೋರಾಟ| ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ಭಾಗವಹಿಸಲು ಮನವಿ

ಕುಲಾಂತರಿ ಬೀಜ ಹಾಗೂ ತಳಿ ಮತ್ತು ಆಹಾರಗಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ಭಾಗವಹಿಸಲು ಬಯಲುಸೀಮೆ ಬೆಳೆಗಾರರ ಸಂಘದ ಸಂಸ್ಥಾಪಕ‌ ಅಧ್ಯಕ್ಷ ಎನ್ ಪಿ ಶಂಕರಯ್ಯ ತಿಳಿಸಿದ್ದಾರೆ.

ಕುಲಾಂತರಿ ಆಹಾರಗಳು ದೇಶ ಪ್ರವೇಶಿಸುವುದನ್ನ ತಿರಸ್ಕರಿಸುವ ಸತ್ಯಾಗ್ರಹದಲ್ಲಿ ಎಲ್ಲಾ ವಿಚಾರವಂತರು, ಪ್ರಗತಿಪರರು, ರೈತರು, ವಿಧ್ಯಾರ್ಥಿಗಳು, ಸಂಘ ಸಂಸ್ಥೆಯವರು ಭಾಗವಹಿಸುವ ಮೂಲಕ ಹಾಗೂ ಕುಲಾಂತರಿ ಆಹಾರ ತಿರಸ್ಕರಿಸುವ ಮೂಲಕ ಸುಸ್ಥಿರ ಮತ್ತು ಸಮರ್ಥನೀಯವಾದ ಹಾಗೂ ಹವಾಮಾನ ವೈಪರಿತ್ಯಗಳಿಗೆ ಹೊಂದಿಕ್ಕೊಳ್ಳುವ ಗುಣವುಳ್ಳ ಸಹಜ ಬೇಸಾಯ, ಸಾವಯವ ಕೃಷಿ ಪದ್ದತಿಗಳ ಮೂಲಕ ನಮ್ಮ ಭವಿಷ್ಯವನ್ನು ಮರು ಹುಟ್ಟು ಪಡೆಯಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅವರು

ಈ ನಿಟ್ಟಿನಲ್ಲಿ ತುಮಕೂರಿನ ಹೊನ್ನುಡುಕೆ ಹ್ಯಾಂಡ್ ಪೊಸ್ಟ್ ಬಳಿ ಇರುವ ಗಾಂಧಿ ಸಹಜ ಬೇಸಾಯ ಆಶ್ರಮ ದೊಡ್ಡಹೊಸೂರು ಗ್ರಾಮದಲ್ಲಿ ವಿಚಾರ ಸಂಕಿರಣ ಸೆಪ್ಟೆಂಬರ್ 29ರಿಂದ ಆಕ್ಟೊಬರ್ 2ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ವಿಚಾರ ಸಂಕಿರಣದಲ್ಲಿ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಕುಲಾಂತರಿ ಆಹಾರಗಳ ಪ್ರತಿಕೂಲ ಪರಿಣಾಮಗಳ ಕುರಿತು ಮತ್ತು ಪಂಚಾಯಿತಿ ಮಟ್ಟದಲ್ಲಿ ನೈಸರ್ಗಿಕ ಕೃಷಿಯನ್ನು ಮುಂದುವರೆಸುವ ಕಾರ್ಯತಂತ್ರಗಳ ಕುರಿತು ಗೊಷ್ಠಿಗಳು ನಡೆಲಿದ್ದು ರಾಜ್ಯದ್ಯಾಂತ ಕುಲಾಂತರಿ ತಳಿ ವಿರೋಧಿಸಲು ಪ್ರಗತಿಪರರು ಸುಸ್ಥಿರ ಕೃಷಿ ಬಯಸುವವರು ಭಾಗವಹಿಸಲಿದ್ದಾರೆ.

ಮದ್ದೂರು ತಾಲೂಕಿನಿಂದಲೂ ಸೆಪ್ಟಂಬರ್ 29ರಂದು ಭಾನುವಾರ ಬಯಲುಸೀಮೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ದೊಡ್ಡ ಹೊಸೂರು ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದೇವೆ ಎಂದಿರುವ ಎನ್ ಪಿ ಶಂಕರಯ್ಯ ಮಂಡ್ಯ ಜಿಲ್ಲೆಯಾದ್ಯಾಂತ ರೈತರು, ಪ್ರಗತಿಪರರು ಭಾಗವಹಿಸಲು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!