ಬಿಜೆಪಿಯ ಆಂತರಿಕ ಕಲಹ ಈಗ ಬಹಿರಂಗ ಕಲಹವಾಗಿ ಮಾರ್ಪಟ್ಟಿದೆ, ಮುಂದೆ ಬೀದಿ ಕಾಳಗವಾಗಿವುದು ನಿಶ್ಚಿತ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರನ್ನು ಬಿಜೆಪಿಗರು ಒಪ್ಪಿಕೊಳ್ಳಲು ತಯಾರಿಲ್ಲ ಎನ್ನುವುದು ಕನ್ನಡಿಯ ಪ್ರತಿಬಿಂಬದಷ್ಟೇ ಸತ್ಯವಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಅಸಮಾಧಾನ ಯಾಕಾಗಿ ? ಆಯ್ಕೆಯಾದವರು ಅನರ್ಹರು ಎಂದೇ? ಅಥವಾ ಅಸೂಯೆಗಾಗಿಯೇ? ಬಿಜೆಪಿಗರೇ ಬೆಲೆ ಕೊಡದ ವಿಪಕ್ಷ ನಾಯಕನ ಮಾತಿಗೆ ಕಾಂಗ್ರೆಸ್ ಬೆಲೆ ಕೊಡಬೇಕೆ? ಆರ್.ಅಶೋಕ್ ಅವರು ಮೊದಲು ತಮ್ಮ ಪಕ್ಷದವರ ಮೆಚ್ಚುಗೆ ಪಡೆದು ಬರಲಿ, ನಂತರ ಕಾಂಗ್ರೆಸ್ ಬಗ್ಗೆ ಮಾತಾಡಲಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!
ಅಶೋಕ್, ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ.@RAshokaBJP ಅವರೇ, ನೀವು ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ಇದೆ, ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ… pic.twitter.com/uzcsL4YsZu— Karnataka Congress (@INCKarnataka) November 23, 2023
“>
ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ! ಅಶೋಕ್, ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ. ಆರ್.ಅಶೋಕ್ ಅವರೇ, ನೀವು ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ಇದೆ, ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ! 6 ತಿಂಗಳು ಸುದೀರ್ಘ ಸರ್ಕಸ್ ನಡೆಸಿದರೂ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅಳೆದು ತೂಗಲು ಸಮಯ ಸಿಗಲಿಲ್ಲವೇ ಎಂದು ಲೇವಡಿ ಮಾಡಿದೆ.