ಶಿಕ್ಷಣ ಸಂಸ್ಥೆಯಲ್ಲಿ 20 ವರ್ಷ ಸೇವೆ ಸಲ್ಲಿಸಿರುವ ಮಧು ಮಾದೇಗೌಡರಿಗೆ ಪದವೀಧರ ಹಾಗೂ ಶಿಕ್ಷಕರ ಸಮಸ್ಯೆಗಳ ಅರಿವಿದ್ದು, ಅದನ್ನು ಬಗೆಹರಿಸಲು ಒಂದು ಅವಕಾಶ ಕೊಡಿ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಮನವಿ ಮಾಡಿದರು.
ಪಾಂಡವಪುರ ಹಾಗೂ ಕ್ಯಾತನಹಳ್ಳಿಯ ವಿವಿಧ ಶಾಲಾ ಕಾಲೇಜುಗಳಿಗೆ ಇಂದು ಬೇಟಿ ನೀಡಿದ ದಿನೇಶ್ ಗೂಳೀಗೌಡ ಮಧು ಮಾದೇಗೌಡರ ಪರ ಪ್ರಚಾರ ಮಾಡಿದರು. ಶಂಭುಲಿಂಗೇಶ್ವರ ಶಾಲೆ, ಬಿಜಿಎಸ್ ನಡೆಸಿದ ಶಾಲೆ, ಬಿಐಒ ಕಚೇರಿ, ಗರ್ಲ್ಸ್ ಹೈಸ್ಕೂಲ್, ಆದರ್ಶ ಸ್ಕೂಲ್ಸ್ ಸೇರಿದಂತೆ ತರಗತಿಗಳಲ್ಲಿ ಪ್ರಚಾರ ಮಾಡಲಾಯಿತು.
ದಿವಗಂತ ಜಿ. ಮಾದೇಗೌಡ ಅವರ ಪುತ್ರ ಬಿಐ ಪದವೀಧರರೂ ಆಗಿರುವ ಮಧು ಮಾದೇಗೌಡರು ಒಂದು ಶಿಕ್ಷಣ ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪದವೀಧರರು, ಶಿಕ್ಷಕರು, ಉಪಾಧ್ಯಾಯರು ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ.
ಹೀಗಾಗಿ ಇವರೆಲ್ಲರಿಗೂ ಧ್ವನಿಯಾಗಿ, ಸಮಸ್ಯೆಗಳನ್ನು ಪರಿಹರಿಸುವುದು ಇವರ ಕಾರ್ಯ ನಿರ್ವಹಣೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.ಎಲ್ಲಡೆ ಕಾಂಗ್ರೆಸ್ ಪರ ಅಲೆ ಇದ್ದು, ಮತಯಾಚನೆಗೆ ಹೋದ ಕಡೆಗಳಲ್ಲಿ ಮಧು ಮಾದೇಗೌಡರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇವರನ್ನು ಪದವೀಧರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸೂರ್ಯ ಹೇಗೆ ಪೂರ್ವದಲ್ಲಿ ಹುಟ್ಟುತ್ತಾನೋ, ಹಾಗೇ ಮಧು ಜಿ. ಮಾದೇಗೌಡ ಅವರ ಗೆಲುವು ಸಹ ಅಷ್ಟೇ ಸತ್ಯ. ಇವರ ಗೆಲುವು ನಿಶ್ಚಿತವಾಗಿದೆ, ಇವರ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದವರಿಗೆ ಯಾವುದೇ ಮೋಸವಿಲ್ಲ ಎಂಬ ವಿಶ್ವಾಸವನ್ನು ದಿನೇಶ್ ಗೂಳಿಗೌಡ ಅವರು ಹೊಂದಿದ್ದಾರೆ.
ಪಾಂಡವಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಕೃಷ್ಣೇಗೌಡ್ರು, ಮಂಡ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್. ತ್ಯಾಗರಾಜ್ ಅವರು ಸೇರಿದಂತೆ ಪಕ್ಷದ ಅನೇಕ ಪ್ರಮುಖರು, ಪದಾಧಿಕಾರಿಗಳು ಪ್ರಚಾರ ಕಾರ್ಯದಲ್ಲಿದ್ದರು.
ಇದನ್ನು ಓದಿ: ನಿರುದ್ಯೋಗ ಪದವೀಧರರಿಗೆ ಭತ್ಯೆ