Friday, October 11, 2024

ಪ್ರಾಯೋಗಿಕ ಆವೃತ್ತಿ

150 ಪ್ರಶಸ್ತಿ ಗಳಿಸಿದ ಚಿತ್ರಕ್ಕೆ ಆಶೀರ್ವದಿಸಿ

ದಾರಿ ಯಾವುದಯ್ಯ ವೈಕುಂಠಕೆ ಚಿತ್ರದ ಕತೆ ವಾಸ್ತವಕ್ಕೆ ಬಹಳ ಹತ್ತಿರವಾಗಿದ್ದು, ಈಗಾಗಲೇ ದೇಶ-ವಿದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ 150 ಪ್ರಶಸ್ತಿಗಳನ್ನು ಪಡೆದಿದೆ. ಮೇ 20 ರಂದು ಈ ಚಿತ್ರ ಬಿಡುಗಡೆಯಾಗುತ್ತಿದ್ದು, ರಾಜ್ಯದ ಜನತೆ ಆಶೀರ್ವದಿಸಬೇಕೆಂದು ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದಾರಿ ಯಾವುದಯ್ಯ ವೈಕುಂಠಕೆ ಚಿತ್ರದೆ ಶೇ. 80ರಷ್ಟು ಚಿತ್ರೀಕರಣ ರಾಮನಗರದ ಸ್ಮಶಾನದಲ್ಲಿ ನಡೆದಿದೆ. ದೇಶ-ವಿದೇಶಗಳಲ್ಲಿ ನಡೆದ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನ ಕಂಡು 150 ಪ್ರಶಸ್ತಿಗಳನ್ನು ಗಳಿಸಿದ್ದು ಆರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ ಎಂದರು.

ನಿರ್ಮಾಪಕ ಶರಣಪ್ಪ ಕೊಟಗಿ ಮಾತನಾಡಿ, ಚಿತ್ರಕ್ಕೆ ಸುಮಾರು 65 ಲಕ್ಷ ಹಣ ಖರ್ಚಾಗಿದೆ‌. ಮಂಡ್ಯ ರಾಮನಗರ ಬೆಂಗಳೂರು ನಲ್ಲಿ ಚಿತ್ರೀಕರಣ ನಡೆದಿದ್ದು ಉತ್ತಮ ಅಭಿಪ್ರಾಯ ರೂಪಗೊಂಡಿದೆ. ಬೆಂಗಳೂರಿನಲ್ಲಿ ನಡೆದ ಚಿತ್ರೋತ್ಸವದಲ್ಲಿ ನಮ್ಮ ನಮ್ಮ ಚಿತ್ರ ಪ್ರಶಸ್ತಿ ಲಭಿಸಿದ್ದು, ರಾಜ್ಯಪಾಲರು ನಮ್ಮ ಚಿತ್ರಕ್ಕೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಜನತೆ ಕೂಡ ಚಿತ್ರಮಂದಿರಗಳಲ್ಲಿ ತೆರಳಿ ನಮ್ಮ ಚಿತ್ರ ನೋಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಚಿತ್ರದ ನಾಯಕ ವರ್ಧನ್ ಮಾತನಾಡಿ, ನಾನು ಇದುವರೆಗೂ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಈ ಚಿತ್ರದಲ್ಲಿ ನನ್ನ ಪಾತ್ರ ಸಂಪೂರ್ಣವಾಗಿದೆ. ಪ್ರೀತಿ ಹಾಗೂ ಸಹಕಾರ ಬೇಕು ಎಂದು ಮನವಿ ಮಾಡಿದರು ಚಿತ್ರದ ನಾಯಕಿ ತಿಥಿ ಚಿತ್ರದ ಪೂಜಾ ಮಾತನಾಡಿ, ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ರೀತಿಯ ಪಾತ್ರ ನಾನೆಂದೂ ಮಾಡಿರಲಿಲ್ಲ. ಹೆಣ್ಣಿನ ಸಂವೇದನೆಯನ್ನು ಸೂಕ್ಷ್ಮವಾಗಿ ಪ್ರೀತಿಸಿರುವ ವಿಚಿತ್ರ ವಾಸ್ತವತೆಗೆ ಬೆಳಕು ಚೆಲ್ಲುತ್ತದೆ ಎಂದರು. ಚಿತ್ ನಟ ಸುಚಿತ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!