61ನೇ ಜನುಮ ದಿನವನ್ನು ರಕ್ತದಾನ ಮೂಲಕ ಆಚರಣೆ
ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ಕ.ರಾ.ದ.ಸಂ.ಸ (ಎಂ.ಬಿ.ಶ್ರೀನಿವಾಸ್ ಬಣ) ಸಂಘಟನಾ ವತಿಯಿಂದ ಪದಾಧಿಕಾರಿಗಳ ಸಭೆಯನ್ನು ಹೆಚ್.ಪಿ.ಜವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಮೇ 15 ರಂದು ಎಂ.ಬಿ.ಶ್ರೀನಿವಾಸ್ ರವರ 61ನೇ ಜನುಮ ದಿನವನ್ನು ರಕ್ತದಾನ ಮಾಡುವುದರ ಮೂಲಕ ಆಚರಿಸುವುದಾಗಿ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.
ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸುವುದರ ಬಗೆಗೂ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಸಂತೋಷ್, ಶಿವಮೂರ್ತಿ, ಸ್ವಾಮಿ, ಚುಂಚಯ್ಯ ಮಾಜಿ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ರಾಹುಲ್ ಪಿ. ಶ್ರೀನಿವಾಸ್. ತಾಲ್ಲೂಕು ಸಂಚಾಲಕ ಹುಸ್ಕೂರು ಕುಮಾರ್, ಧರ್ಮಾತ್ಮಾ, ರವಿ, ಹುಳೆನಳ್ಳಿ ಪವನ್, ಯತೀಶ್ ಹಿರಿಯ ಹೋರಾಟಗಾರರಾದ ನಾಗರಾಜಯ್ಯ, ಜಕ್ಕನಳ್ಳಿ ದ್ಯಾವಯ್ಯ, ಎಂ.ಬಿ. ಚಲುವರಾಜು, ಹಲಗಪ್ಪ, ಶಿವಣ್ಣ, ಕರಿಯಯ್ಯ, ಪಾಪಣ್ನ, ಪ್ರಕಾಶ್, ಭೈರವ, ಸುದರ್ಶನ ಸಭೆಯಲ್ಲಿ ಭಾಗವಹಿಸಿದ್ದರು.