ಮಂಡ್ಯದ ಜೆ.ಸಿ ವೃತ್ತದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬರ್ಡ್ಸ್ ನೊಡಲ್ ಸಂಸ್ಥೆ ಹಾಗೂ ವಿಕಸನ ಸಂಸ್ಥೆಯ ವತಿಯಿಂದ ಮಕ್ಕಳ ಮಾಸಾಚರಣೆಯ ಪ್ರಯುಕ್ತ ನಗರದ ಎಲ್ಲಾ ವೃತ್ತದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಚಿತ್ರವನ್ನು ಅಂಟಿಸುವ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ಎಸ್. ರಾಜಮೂರ್ತಿ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಮಕ್ಕಳ ಸಹಾಯವಾಣಿ 1098 ಕುರಿತು ನಗರದ ಪ್ರಮುಖ ಸ್ಥಳಗಳಲ್ಲಿ ಭಿತ್ತಿ ಚಿತ್ರಗಳನ್ನು ಅಂಟಿಸಲಾಗಿದೆ.
ಮಕ್ಕಳಿಗೆ, ಮಹಿಳೆಯರಿಗೆ ಸಮಾಜದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು.ಅವರಿಗೆ ಏನೇ ಸಮಸ್ಯೆಯಾದರೂ ತಕ್ಷಣ ಸಹಾಯವಾಣಿ ಗೆ ಕರೆ ಮಾಡಿ ಮಾಹಿತಿ ನೀಡಬಹುದು.ಈ ಹಿನ್ನೆಲೆಯಲ್ಲಿ 1098 ಕುರಿತು ಜಾಗೃತಿ ಮೂಡಿಸುವಂತಹ ಮಹತ್ವದ ಕಾರ್ಯ ಇದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೇತನ್ ಕುಮಾರ್, ಸಂಯೋಜಕ ಶೋಭಾವತಿ, ರಕ್ಷಣಾಧಿಕಾರಿ ರಾಜೇಂದ್ರ, ಸಬ್ಇನ್ಸ್ಪೆಕ್ಟರ್ ಸಾಹೇಬಗೌಡ,ಸದಸ್ಯರುಗಳಾದ ಸಿಂಚನ, ಸುಜಾತ, ಅನುಪಮ ಚಿತ್ರ, ಸಂಧ್ಯಾ, ಶಂಕರ್, ಪ್ರಮೋದ್ ,ಲಕ್ಷ್ಮೀಶ್, ಶೈಲಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.