ಮಂಡ್ಯ ಜಿಲ್ಲೆಯ ಅನ್ನದಾತ, ಅಭಿವೃದ್ಧಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವು ಆ.3ರಂದು ಬೆಳಿಗ್ಗೆ 10.30ಕ್ಕೆ ಮಂಡ್ಯನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು ಮಂಡ್ಯ ಶಾಸಕ ರವಿಕುಮಾರ್ ಅಧ್ಯಕ್ಷತೆ ವಹಿಸಿ, ಮುಡಾ ನೂತನ ಅಧ್ಯಕ್ಷ ನಹೀಮ್ ಅವರನ್ನು ಸನ್ಮಾನಿಸುವರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೆಶಕ ಶಿವರಾಮೇಗೌಡ ನಾಲ್ವಡಿಯವರ ಭಾವಚಿತ್ರ ಅನಾವರಣ ಮಾಡುವರು. ಸಹ ಪ್ರಾಧ್ಯಾಪಕ ಡಾ. ಲಿಂಗರಾಜು ನಾಲ್ವಡಿ ಕುರಿತು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು, ಪತ್ರಕರ್ತ ನವೀನ್, ಪ್ರಭಾರ ಪ್ರಾಂಶುಪಾಲ ಲಿಂಗೇಗೌಡ, ಮುಖ್ಯೋಪಧ್ಯಾಯರಾದ ಶಬಾನ ಭಾಗವಹಿಸುವರು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಹಾಗೂ ಕಾರ್ಯದರ್ಶಿ ಲಂಕೇಶ್ ಮಂಗಲ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.