ಕರನಿರಾಕರಣೆ ಚಳುವಳಿ ನಡೆಸುತ್ತಿದ್ದ ವಿದ್ಯುತ್ ಗ್ರಾಹಕರ ಬಿಲ್ ಗಳನ್ನು ಅಮಾನತ್ತು ಮಾಡುವುದರ ಬಗ್ಗೆ ಸರ್ಕಾರ ಚೆಸ್ಕಾಂನಿಂದ ವರದಿ ಕೇಳಿದೆ.
ಚೆಸ್ಕಾಂನ ಎಂಡಿ ಜಯವಿಭವಸ್ವಾಮಿ ಅವರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮಾರ್ಗದರ್ಶಕ, ಸಾಮಾಜಿಕ ಕಾರ್ಯಕರ್ತ, ಕೃಷಿಕ ನಲಿಕೃಷ್ಣ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಈ ವಿಷಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಅವರು ಕರ ನಿರಾಕರಣೆ ಚಳುವಳಿ ನಿರತ ಗ್ರಾಹಕರ ಬಿಲ್ ಗಳನ್ನು ಸರ್ಕಾರವೇ ತುಂಬಿ ಕೊಡುವ ವಿಶ್ವಾಸವಿದೆ ಎಂದು ಭರವಸೆ ನೀಡಿದ್ದಾರೆ.
ಮದ್ದೂರಿನ ಚಳುವಳಿ ನಿರತ ಗ್ರಾಹಕರು ಹಾಗೂ ಪ್ರಗತಿಪರ ಸಂಘಟನೆಯ ಮುಖ್ಯಸ್ಥರೊಂದಿಗೆ ಚೆಸ್ಕಾಂ ಕಚೇರಿಯಲ್ಲಿ ನಡೆಸಿದ ಮಾತುಕತೆ ವೇಳೆ 15 ದಿನಗಳ ಕಾಲಾವಕಾಶ ಕೇಳಿರುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಭರವಸೆಯ ಹಿನ್ನೆಲೆಯಲ್ಲಿ ಕರನಿರಾಕರಣೆ ಚಳುವಳಿ ನಿರತರ ವಿದ್ಯುತ್ ಬಿಲ್ ವಸೂಲಿಗೆ ಮುಂದಾಗದಿರುವ ಭರವಸೆಯನ್ನು ಸಹ ಎಂಡಿ ಅವರು ನೀಡಿದ್ದಾರೆ ಎಂದು ನಲಿಕೃಷ್ಣರವರು ತಿಳಿಸಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಯು ಸಂಘಟನೆಗಳ ಪ್ರಾಮಾಣಿಕ ಹೋರಾಟದ ಫಲ ಎಂದು ಸಂಚಾಲಕ ಉಮಾಶಂಕರ್ ಹಾಗೂ ಶ್ರೀನಿವಾಸ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.