ಮಂಡ್ಯದ ರಾಷ್ಟ್ರೀಯ ಫುಟ್ಬಾಲ್ ಕ್ರೀಡಾಪಟು ವಿಶ್ವಾಸ್ ರವರ ಚಿಕಿತ್ಸೆಗಾಗಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ರವರು 50,000 ರೂ.ಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಪಿಇಎಸ್ ಕಾಲೇಜಿನಲ್ಲಿ ಬಿ.ಕಾಂ.ವ್ಯಾಸಂಗ ಮಾಡುತ್ತಿರುವ ವಿಶ್ವಾಸ್ ಕಳೆದ ಜುಲೈ 1 ರಂದು ವಿದ್ಯುತ್ ಶಾಕ್ ಗೆ ಒಳಗಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚಿಕಿತ್ಸೆ ವೆಚ್ಚ ಭರಿಸಲು ಅವರ ಕುಟುಂಬಕ್ಕೆ ಕಷ್ಟವಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು.
ಈ ವಿಷಯ ತಿಳಿದ ಬಿಜೆಪಿ ಜಿಲ್ಲಾಧ್ಯಕ ಸಿ.ಪಿ.ಉಮೇಶ್ ಪಕ್ಷದ ವತಿಯಿಂದ 50,000 ರೂ. ಹಣವನ್ನು ವಿಶ್ವಾಸ್ ಚಿಕಿತ್ಸೆಗೆ ನೀಡುವ ಮೂಲಕ ಆತನ ನೆರವಿಗೆ ಧಾವಿಸಿದ್ದಾರೆ.