Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪ್ರಜ್ವಲ್ – ಹೆಚ್.ಡಿ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳಾದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಅವರನ್ನು ಬಂಧಿಸಲು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ನಡೆಯಿತು.

ಮನೆಕೆಲಸದ ಮಹಿಳೆಯರು ಸೇರಿದಂತೆ ಅಸಂಖ್ಯಾ ದುಡಿಯುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ರಾಷ್ಟ್ರಮಟ್ಟದಲ್ಲಿ ಕುಖ್ಯಾತಿಗೆ ಕಾರಣವಾಗಿದೆ. ಜನಪ್ರತಿನಿಧಿಗಳಿಂದ ನಡೆದಿರುವ ಅತ್ಯಂತ ಘನಘೋರ ಘಟನೆಯಾಗಿದ್ದು, ಇದರ ಕುರಿತ ಉಗ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಂವಿಧಾನದ ಅನುಚ್ಛೇದ 21ರಪ್ರಕಾರ ಮಹಿಳೆಯರು ಮಾನವ ಘನತೆಯಿಂದ ಬದುಕುವ ಹಕ್ಕನ್ನು ಕೊಡುತ್ತದೆ. ಅದರಂತೆ ಮಹಿಳೆಯರು ಘನತೆಯ ಬದುಕನ್ನು ನಡೆಸಲು ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳ ತಡಗಟ್ಟಲು ಅನುಷ್ಠಾನ ಸಮಿತಿ (POSH) ಸ್ಫಾಪಿಸಬೇಕು, SIT ತಂಡ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯಬಾರದು, ಹೊಳೆನರಸಿಪುರ ಪೋಲೀಸ್ ಠಾಣಾಧಿಕಾರಿಯು ದೂರು ದಾಖಲು ಮಾಡಿಕೊಳ್ಳುವಾಗ ಅತ್ಯಾಚಾರ ಸೆಕ್ಷನ್ ಕೈಬಿಟ್ಟಿದ್ದು ಪ್ರಭಾವಿ ಕುಟುಂಬದಲ್ಲಿ ನಡೆದಿರುವುದರಿಂದ ಅತ್ಯಾಚಾರ ಕಲಂ ಸೇರಿಸದೇ ಇರುವ ಇನ್ಸ್ಪೆಕ್ಟರ್ ರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.

ವಿಡಿಯೋದಲ್ಲಿರುವ ವಿವಿಧ ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು, ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಭದ್ರತೆ ಒದಗಿಸಿ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಸಿ.ಕುಮಾರಿ, ಮುಖಂಡರಾದ ಶಿವಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!