ಪುರಾತನ ದೇಸಿ ಕ್ರೀಡೆ ಕಬಡ್ಡಿ ಹಳ್ಳಿಯಿಂದ ದಿಲ್ಲಿವರೆಗೂ, ನಂತರ ವಿಶ್ವದ ನಾನಾ ದೇಶಗಳಿಗೆ ತಲುಪಿದ್ದು, ಮತ್ತಷ್ಟು ದೇಶಗಳಿಗೆ ವಿಸ್ತರಿಸಲಿ ಎಂದು ಸಮಾಜ ಸೇವಕ ಕದಲೂರು ಉದಯ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮದ್ದೂರು ತಾಲ್ಲೂಕಿ ಕೊಕ್ಕರೆ ಬೆಳ್ಳೂರಿನಲ್ಲಿ ವೀರ ಮಾಸ್ತಿ ಕೆಂಪಮ್ಮ ಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿಗಳ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಪ್ಪು ಕಪ್ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಸೀ ಕ್ರೀಡೆ ಕಬ್ಬಡಿ ಸಾವಿರಾರು ವರ್ಷಗಳಷ್ಟು ಪುರಾತನವಾದದ್ದು.ಇಂದು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ಜೊತೆಗೆ ಹೆಸರನ್ನು ತಂದು ಕೊಟ್ಟಿದೆ.ಕಬ್ಬಡ್ಡಿ ಅನ್ನುವುದು ಯಾವುದೇ ಉಪಕರಣಗಳಿಲ್ಲದೆ ಆಡುವ ಅಪ್ಪಟ ದೇಶಿ ಕ್ರೀಡೆ .ಗುಂಡಿಗೆ ಇರುವವರು ಆಡುವ ಆಟ .ಇತ್ತಿಚೆಗೆ ಕಬ್ಬಡಿ ಹವಾ ವಿಶ್ವದಲ್ಲಿ ತುಂಬಾನೇ ಹೆಚ್ಚಾಗುತ್ತಿದೆ ಎಂದರು.
ಮುಖಂಡ ಮಲ್ಲೇಶ್ ಮಾತನಾಡಿ, ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದು ಸಂತಸದ ಸಂಗತಿ. ಅಪ್ಪಟ ದೇಸಿಯ ಹಳ್ಳಿಗಾಡಿನ ಆಟ ಕಬ್ಬಡಿ ನಶಿಸಿ ಹೋಗಬಾರದೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್,ಅಂತರಾಷ್ಟ್ರೀಯ ಕಬ್ಬಡಿ ಆಟಗಾರ, ಭಾರತ ತಂಡದ ಮಾಜಿ ನಾಯಕ ಬಿ.ಸಿ.ರಮೇಶ್,ಎ.ವಿ.ಶ್ರೀನಿವಾಸ್,ಮದ್ದೂರು ಪೋಲಿಸ್ ಇನ್ಸ್‌ಪೆಕ್ಟರ್ ಹರೀಶ್,ಬಾಲಾಜಿ,ಜಿ.ಸಿ.ವಿಜಯ ಕುಮಾರ್ ಮತ್ತಿತರರಿದ್ದರು.