ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದ್ದೂರು ಪಟ್ಟಣದ ಬಳಿ ನಾಲ್ಕು ರಾಜ್ಯ ಹೆದ್ದಾರಿಗಳು ಸಂಪರ್ಕ ಕಲ್ಪಿಸುವ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿಧಾನ ಪರಿಷತ್ ದಿನೇಶ್ ಗೂಳಿಗೌಡ ಮತ್ತು ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಬೆಂಗಳೂರಿನಲ್ಲಿ ಇಂದು ಚರ್ಚಿಸಿದರು.
ಮದ್ದೂರು-ಮಳವಳ್ಳಿ, ಮದ್ದೂರು-ನಾಗಮಂಗಲ, ಮದ್ದೂರು-ತುಮಕೂರು, ಮದ್ದೂರು-ಹಲಗೂರು ಎಂಬ ನಾಲ್ಕು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸಲು ಮದ್ದೂರಿನ ನಿಡಘಟ್ಟ ಮತ್ತು ಚನ್ನೇಗೌಡನದೊಡ್ಡಿಯ ಬಳಿ ಕ್ರಮವಾಗಿ ನಿರ್ಗಮನ ಮತ್ತು ಆಗಮನ ಕಲ್ಪಿಸಲು ಚರ್ಚಿಸಲಾಯಿತು.
ಆಲ್ಲದೆ ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ತಕ್ಷಣ ಕ್ರಮ ವಹಿಸುವಂತೆ ಸೂಚನೆ ಕೊಡಲಾಯಿತು. ಹಾಗೆಯೇ ಕೂಡಲೇ ಈ ಭಾಗದ ರೈತರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸುಲಲಿತ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಸದ್ಯದಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು.
.