Wednesday, June 12, 2024

ಪ್ರಾಯೋಗಿಕ ಆವೃತ್ತಿ

ಕನ್ನಡದ ಕೆಲಸಕ್ಕೆ ನಿವೃತ್ತ ಪೋಲಿಸರಿಂದ ಅಡ್ಡಿ

ಮಂಡ್ಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯುತ್ತಿದ್ದ ಕನ್ನಡದ ಚಟುವಟಿಕೆಗಳಿಗೆ ನಿವೃತ್ತ ಪೊಲೀಸರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರವಿಕುಮಾರ್ ಚಾಮಲಾಪುರ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವಾರ್ತಾ ಇಲಾಖೆ ಪಕ್ಕದ ಖಾಲಿ ನಿವೇಶನ ಗಿಡ, ಗಂಟಿಗಳಿಂದ ಆವೃತ್ತವಾಗಿತ್ತು. ಕಸಾಪದ ಆಗಿನ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯನವರು ಕನ್ನಡದ ಕೆಲಸಗಳಿಗಾಗಿ 2013 ರಲ್ಲಿ ಆಗಿನ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರನ್ನು ಭೇಟಿ ಮಾಡಿದ ಪರಿಣಾಮ, ಅವರು ಕನ್ನಡ ಕಟ್ಟುವ ಕೆಲಸಕ್ಕೆ ಮೌಖಿಕವಾಗಿ ವಾರ್ತಾ ಇಲಾಖೆಯ ಪಕ್ಕದ ಜಾಗವನ್ನು ನೀಡಿದ್ದರು.

ಅಲ್ಲಿ ಉತ್ತಮ ಗ್ರಂಥಾಲಯ, ವಾಚನಾಲಯ ಹಾಗೂ ಪುಸ್ತಕ ಮಾರಾಟ ಕೇಂದ್ರವನ್ನು ತೆರೆಯಲಾಗಿತ್ತು. ಪಕ್ಕದ ಖಾಲಿ ನಿವೇಶನದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಳೆದೊಂದು ದಶಕದಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಯಾವುದೇ ಇಲಾಖೆಗೆ ಸೇರದ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಹಾಗೂ ಸರ್ಕಾರಿ ಜಾಗವನ್ನ 2013 ರಲ್ಲಿ ಮೀರಾ ಶಿವಲಿಂಗಯ್ಯನವರು ಸುಮಾರು 6 ಲಕ್ಷ ರೂ. ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಕಟ್ಟಡವನ್ನು ಸುಸ್ಥಿತಿಗೆ ತಂದಿದ್ದರು. ಈಗ ಗ್ರಂಥಾಲಯ, ವಾಚನಾಲಯ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಅಂದಿನಿಂದ ಇಂದಿನವರೆಗೂ ಈ ವಾಚನಾಲಯಕ್ಕೆ ದಿನನಿತ್ಯ ಕನ್ನಡದಿನ ಪತ್ರಿಕೆಗಳನ್ನು ಓದಲು, ಸಾಕಷ್ಟು ಮಂದಿ ಬಂದು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ವಿರೋಧಿಸಿದರೆ ಕನ್ನಡ ಪರ ಮನದ ಸಾರ್ವಜನಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿಗಳು ತಮಗೆ ವಿಶ್ರಾಂತಿ ಪಡೆಯಲು ಪಕ್ಕದ ಜಾಗವನ್ನು ಬಳಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಇವರು ಈಗ ನಮ್ಮನ್ನೆ ಈ ಜಾಗ ಬಿಟ್ಟು ಹೋಗಿ ಎನ್ನುತ್ತಿದ್ದಾರೆ, ಇದು ಸರಿಯೇ ಎಂದು ಪ್ರಶ್ನಿಸಿದರು.

ಯಾವುದೇ ಒಂದು ಜಾಗ ಆಲಸಿಗಳ ಬೀಡಾಗದೆ, ಕಾಡು ಹರಟೆಗೆ ನೆಲೆಯಾಗದೆ ಸುಸಂಸ್ಕೃತರನ್ನು ತನ್ನೆಡೆಗೆ ಸೆಳೆಯುವ ಪುರುಷ ಮಣಿ ಯಾಗಬೇಕು, ಕಳೆದ ಸಮಯ ಮತ್ತೆ ಬಾರದು ಎಂಬ ಹಿರಿಯರ ನುಡಿ ಸದಾ ಸ್ಮರಣೀಯ ಕನ್ನಡಕ್ಕೆ ಕನ್ನಡಗರಿಂದಲೇ ಅಡೆತಡೆ, ತೊಂದರೆ, ಬೆದರಿಕೆ ಗಲಾಟೆಯಾಗುತ್ತಿರುವುದು ವಿಷಾದನೀಯ ಎಂದರು.

ಇದು ನನ್ನೊಬ್ಬನ ಸ್ವತ್ತಲ್ಲ. ಇದು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥ. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಆಶ್ರಯ ಸ್ಥಾನ ಕನ್ನಡ ಸಾಹಿತ್ಯ ಪರಿಷತ್ತಿನ ಸಹಭಾಗಿತ್ವದಲ್ಲಿ ಯಾರೇ ಕನ್ನಡಿಗರೂ, ಇಲ್ಲಿ ಕನ್ನಡಪರ ಚಟುವಟಿಕೆಗಳನ್ನು ಆಯೋಜಿಸಲು ಮುಕ್ತ ಅವಕಾಶವಿದೆ. ಹಾಗಾಗಿ ಈ ಖಾಲಿ ಜಾಗ ಯಾರಿಗೂ ಸೇರದಿರುವ ಅಂದಿನ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರಿಂದ ಮೌಖಿಕವಾಗಿ ಅನುಮತಿಯನ್ನು ಪಡೆದಿರುವ ಜಾಗ ಕನ್ನಡದ ಚಟುವಟಿಕೆಗೆ ಮೀಸಲಾಗಬೇಕು ಎಂಬು ದು ಎಲ್ಲರ ಇಚ್ಛೆಯಾಗಿದೆ ಎಂದರು.

ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ,ನಿವೃತ್ತ ಪೊಲೀಸ್ ಅಧಿಕಾರಿಗಳು ಒಂದು ವೇಳೆ ಮುಂದೆಯೂ ಇಂತಹ ತೊಂದರೆ ಅಡೆತಡೆ ಮುಂದುವರೆಸಿದರೆ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 26 ಸಾವಿರ ಆಜೀವ ಸದಸ್ಯರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಜಿಲ್ಲಾ ಸಾಹಿತಿಗಳು ಸರದಿ ಉಪವಾಸಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲ ಯ್ಯ ಮುಂದೆ ನಿಂತು ನಮ್ಮ ಕನ್ನಡ ಭವನವನ್ನು ವಶಪಡಿಸಿಕೊಂಡಿರುವ ಪೊಲೀಸ್ ಅವರಿಂದ ತೆರವುಗೊಳಿಸಿ ಎಂದಿನಂತೆ ಕನ್ನಡದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಹಿರಿಯ ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ, ಕಸಾಪ ಮಾಜಿ ಅಧ್ಯಕ್ಷರಾದ ಧರಣೇಂದ್ರಯ್ಯ, ತೈಲೂರು ವೆಂಕಟಕೃಷ್ಣ, ಹುಸ್ಕೂರು ಕೃಷ್ಣೇಗೌಡ, ಅಪ್ಪಾಜಪ್ಪ, ಸುಜಾತ ಕೃಷ್ಣ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!