ಮದ್ದೂರು ತಾಲೂಕು ಕೊಪ್ಪ ಹೋಬಳಿಯ ತಗ್ಗಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ಗಾಳನ್ನು ಪ್ರತಿ ವರ್ಷದಂತೆ ದಿವಂಗತ ಶ್ರೀ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಚಂದ್ರಣ್ಣ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಗಳು ಉಳಿಯಬೇಕು. ಸರ್ಕಾರಿ ಶಾಲೆಗೆ ಹೆಚ್ಚು ಹೆಚ್ಚು ಮಕ್ಕಳನ್ನು ಸೇರಿಸಬೇಕು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಕಲಿಕೆಗೆ ಹೆಚ್ಚು ಒತ್ತು ಕೊಡಲಿದ್ದು,ಉತ್ತಮ ಶಿಕ್ಷಣ ಸಿಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಹೆಚ್ಚು ಪ್ರತಿಭಾವಂತರಾಗಿರುತ್ತಾರೆ ಹಾಗೂ ಹೆಚ್ಚು ವಿದ್ಯಾವಂತರಾಗಿರುವ ಉದಾರಣೆಗಳು ಸಾಕಷ್ಟಿದೆ.ಇಂದು ಉನ್ನತ ಹುದ್ದೆಗಳಲ್ಲಿ, ಉನ್ನತ ಅಧಿಕಾರಿಗಳು ಮತ್ತು ರಾಜಕಾರಣಿಗಳು ಓದಿರುವುದೇ ಸರ್ಕಾರಿ ಶಾಲೆಗಳಲ್ಲಿ. ಹೀಗಾಗಿ ಸರ್ಕಾರ ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ಸದರಿ ಕಾರ್ಯಕ್ರಮಕ್ಕೆ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ವೆಂಕಟೇಶ್,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ ಗೋವಿಂದ್, ಗ್ರಾಮದ ಮುಖಂಡರಾದ ವೆಂಕಟಪ್ಪ , ಸ್ವಾಮಿ, ಅಪ್ಪಾಜಣ್ಣ, ಗೋಪಾಲ ಮುಂತಾದವರು ಹಾಗೂ ಮುಖ್ಯ ಶಿಕ್ಷಕ ಸಿದ್ದರಾಮಯ್ಯ, ಸಹ ಶಿಕ್ಷಕ ರಮೇಶ್, ಶ್ವೇತಕುಮಾರಿ ಹಾಗೂ ಸಿಂಧು ಭಾಗವಹಿಸಿದ್ದರು.