ಕೆ.ಆರ್.ಪೇಟೆಯಲ್ಲಿ ವಕೀಲರ ಸಂಘದ ಚುನಾವಣೆಯು ಇದೇ ತಿಂಗಳು ಮೇ 14 ರಂದು ನಿಗಧಿಯಾಗಿದ್ದು, ಈ ವಕೀಲರ ಸಂಘದ ಚುನಾಣೆಯಲ್ಲಿ ಈ ಬಾರಿ 154 ಮಂದಿ ವಕೀಲರು ಮತ ಚಲಾಯಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 17 ಮಂದಿ ಸ್ಪರ್ಧಿಸಲಿದ್ದಾರೆ ಎಂದು ಚುನಾವಣಾ ಅಧಿಕಾರಿ ಮತ್ತು ಹಿರಿಯ ವಕೀಲರಾದ ಎಂ.ಎನ್. ರಾಮಸ್ವಾಮಿ ತಿಳಿಸಿದ್ದಾರೆ.
ಮತದಾನವು ಮೇ 14ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ, ಮಧ್ಯಾಹ್ನ 2 ಗಂಟೆಯವರಗೆ ನಡೆಯಲಿದೆ. ಮತದಾನದ ನಂತರ, ಅಂದೇ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ವಕೀಲರ ಸಂಘದ ಚುನಾವಣೆಯಲ್ಲಿ ತೀವ್ರ ಸ್ಪರ್ಧೆಯಿದ್ದು, ಅಧ್ಯಕ್ಷ ಸ್ಥಾನಕ್ಕೆ ವಕೀಲರಾದ ಎನ್.ಆರ್.ರವಿಶಂಕರ್, ಎಸ್. ಸತೀಶ್, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ದಿನೇಶ್, ಕೆ.ಜೆ.ನಿರಂಜನ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆರ್.ಕೆ. ರಾಜೇಗೌಡ, ಎಸ್.ಜೆ. ಮಂಜುನಾಥ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸಿ.ನಿರಂಜನ್, ಎಸ್.ಎನ್. ಧನಂಜಯ, ಖಜಾಂಚಿ ಸ್ಥಾನಕ್ಕೆ ಕೆ.ಮಂಜುಳ ಮತ್ತು ಜಗದೀಶ್ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನಿರ್ದೇಶಕರ ಐದು ಸ್ಥಾನಕ್ಕೆ ಎಸ್.ಪ್ರತಾಪ್, ಎಂ.ರಾಣಿ, ಎಚ್.ಆರ್. ಸುಂದರೇಶ್, ಎ.ಎನ್. ವಿಜಯಕುಮಾರ್, ಟಿ.ಎಸ್. ಪ್ರಭಾಕರ,ಎಂ.ಎ. ಅವಿನಾಶ್ ಮತ್ತು ಜಿ.ಎಂ. ಯೋಗೇಂದ್ರ ಸ್ಪರ್ಧಿಸಿದ್ದು, ಮಹಿಳಾ ಮೀಸಲಾತಿಯಲ್ಲಿ ಎಂ.ಸಿ. ಸುಜಾತ ಅವಿರೋಧ ಆಯ್ಕೆಯಾಗಿದ್ದಾರೆ.