Friday, April 19, 2024

ಪ್ರಾಯೋಗಿಕ ಆವೃತ್ತಿ

ಸಾಮಾನ್ಯ ಜ್ಞಾನವಿಲ್ಲದ ಪದವೀಧರ ಮತದಾರರು

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮೊದಲ ಸುತ್ತಿನ ಪ್ರಥಮ ಪ್ರಾಶಸ್ತ್ಯ ದ ಮತಎಣಿಕೆಯಲ್ಲಿ ತಿರಸ್ಕೃತ ಮತಗಳು ಸಂಖ್ಯೆ 3,718 ಆಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

49,700 ಮತಗಳಲ್ಲಿಯೇ 3,718 ಪದವೀಧರರ ಮತಗಳು ತಿರಸ್ಕೃತವಾಗಿವೆ ಎಂದರೆ ಇವರೇನು ಪದವೀಧರರೋ… ಇಲ್ಲ ಅನಕ್ಷರಸ್ಥರೋ… ಎಂಬ ಸಂಶಯ ಮೂಡುತ್ತದೆ.

ಪದವೀಧರ ಮತದಾರರೇ ಹೀಗೆ ಕುಲಗೆಟ್ಟ ಮತ ಹಾಕುತ್ತಾರೆ ಎಂದರೆ ಇವರಿಗೆ ಇನ್ನೇಗೆ ಮತದಾನ ಮಾಡುವುದನ್ನು ಹೇಳಬೇಕೋ ಗೊತ್ತಿಲ್ಲ.ಎಲ್ಲಾ ಅಭ್ಯರ್ಥಿಗಳು ತಾವು ಹಂಚಿದ ಕರಪತ್ರ ಮಾದರಿಯಲ್ಲಿ ಹೇಗೆ ಮತ ಹಾಕಬೇಕು ಎಂದು ಮತದಾರರಿಗೆ ಸರಳವಾಗಿಯೇ ತಿಳಿಸಿದ್ದರು.

ಅಭ್ಯರ್ಥಿಗಳ ಹೆಸರಿನ ಮುಂದೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ 1 ಎಂದು ಬರೆಯಬೇಕು. ನಂತರ ಉಳಿದ ಅಭ್ಯರ್ಥಿಗಳ ಮುಂದೆ 2,3,4 ಹೀಗೆ ಬರೆಯಬೇಕು.1 ಎಂದು ಬರೆಯದ ಮತಗಳು ತಿರಸ್ಕೃತವಾಗುತ್ತೆ ಎಂದೆಲ್ಲಾ ಹತ್ತಾರು ಬಾರಿ ಸರಳವಾಗಿ ಹೇಳಿದ್ದರೂ 3,718 ಹೆಚ್ಚು ಮತಗಳು ತಿರಸ್ಕೃತವಾಗಲು ಕಾರಣರಾದ ಪದವೀಧರರಿಗೆ ಸಾಮಾನ್ಯ ಜ್ಞಾನವೂ ಇಲ್ಲ ಎಂಬ ವಿಚಾರ ತಿಳಿಯುತ್ತದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದ 6,500ಕ್ಕೂ ಹೆಚ್ಚು ಮತಗಳು ತಿರಸ್ಕೃತವಾಗಿವೆ.ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸೋತಿದ್ದು ನೂರು ಚಿಲ್ಲರೆ ಮತಗಳಿಂದ ಒಬ್ಬ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತಲೂ ಹೆಚ್ಚು ತಿರಸ್ಕೃತ ಮತಗಳು ಇದ್ದವು ಎಂದರೆ ಈ ಪದವೀಧರ ಮತದಾರರು ಎಷ್ಟು ತಿಳುವಳಿಕೆ ಇಲ್ಲದವರು ಎಂಬುದು ತಿಳಿಯುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!