ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎಂದಿರುವ ಕಾಂಗ್ರೆಸ್ ನವರ ಆರೋಪಕ್ಕೆ ಕಿಡಿಕಾರಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಫಲಿತಾಂಶದ ನಂತರ ಯಾವುದು ಬಿ ಟೀಮ್ ಎಂಬುದು ಗೊತ್ತಾಗಲಿದೆ ಎಂದು ತಿರುಗೇಟು ನೀಡಿದ್ದಾರೆ.
ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜನತಾ ಜಲಧಾರೆ ಕಾರ್ಯಕ್ರಮ ರಾಜಕೀಯ ಗಿಮಿಕ್ ಎಂದು ಹೇಳುತ್ತಿದ್ದಾರೆ.
ಆದರೆ ಜನತಾ ಜಲಧಾರೆ 5 ಅಂಶಗಳ ಕಾರ್ಯಕ್ರಮವಾಗಿದ್ದು, ನೀರಾವರಿ ಯೋಜನೆಗಳ ಬಗ್ಗೆ ಜೆಡಿಎಸ್ ಪಕ್ಷ ಮಾಡಿರುವ ಹೋರಾಟ ರಾಜ್ಯದ ಜನರಿಗೆ ತಿಳಿಸುವ ಪ್ರಯತ್ನವನ್ನು ಕುಮಾರಸ್ವಾಮಿಯವರು ರಾಜ್ಯಾದ್ಯಂತ ಮಾಡುತ್ತಿದ್ದಾರೆ.
ಜಲಧಾರೆ ಬಗ್ಗೆ ಮಾತನಾಡುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಮೇಕೆದಾಟು ಯೋಜನೆ ನಾಳೆಯೇ ತರುತ್ತಾರೆಯೇ ಎಂದು ಪ್ರಶ್ನೆ ಮಾಡಿದರು. ಈ ತಿಂಗಳ 13 ರಂದು ಜಲಧಾರೆ ಕಾರ್ಯಕ್ರಮ ಮುಕ್ತಾಯವಾಗಲಿದ್ದು, ಕೊನೆಯ ದಿನದಲ್ಲಿ ಸಮಾವೇಶ ನಡೆಸಲಾಗುವುದು.
ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಕುಟುಂಬಗಳ ಹಿಡಿತದಲ್ಲಿದೆ : ಸಿ.ಟಿ. ರವಿ
ಸಚಿವರಾದ ನಾರಾಯಣ ಗೌಡ, ನಾನು ಜೆಡಿಎಸ್ ಪಕ್ಷದಲ್ಲಿ ನಮಗೆ ತುಂಬಾ ಕಿರುಕುಳ ಬಂದಿದೆ. ಅದಕ್ಕಾಗಿಯೇ ನಾನು ಪಕ್ಷ ಬಿಡಬೇಕು ಎಂಬುದರ ಬಗ್ಗೆ ನಾನು ಉತ್ತರಿಸುವುದಿಲ್ಲ.
ಎಸ್.ಡಿ.ಜಯರಾಮ್ ರವರ ಪುತ್ರ ಅಶೋಕ್ ಜಯರಾಮ್ ಹಾಗೂ ಅಶ್ವಿನ್ ಗೌಡ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವುದು ಅವರಿಗೆ ಬಿಟ್ಟದ್ದು, ಯಾರು ಯಾವ ಪಕ್ಷಕ್ಕಾದರೂ ಹೋಗಲಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಡಿ.ರಮೇಶ್ ಮತ್ತಿತರರು ಇದ್ದರು.