Wednesday, September 11, 2024

ಪ್ರಾಯೋಗಿಕ ಆವೃತ್ತಿ

ಹೋಬಳಿ ಮಟ್ಟದ ಕ್ರೀಡಾಕೂಟ: ಮುತ್ತೇಗೆರೆ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿ ಬೇಬಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ 2022-23 ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮುತ್ತೇಗೆರೆ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ಬಾಲಕರ ವಿಭಾಗ: ನಿಖಿಲ್ ಗೌಡ ಹೆಚ್.ಸಿ -ಮೀ(ತೃತೀಯ), ಉದ್ದಜಿಗಿತ(ದ್ವಿತೀಯ), ಸುರೇಶ ಹೆಚ್.ಎಸ್ – 4೦೦ಮೀ(ಪ್ರಥಮ), 5 ಕಿ.ಮೀ.ನಡಿಗೆ(ಪ್ರಥಮ), ನವೀನ.ಎಂ – 8೦೦ಮೀ(ಪ್ರಥಮ) 3೦೦೦ಮೀ(ಪ್ರಥಮ), ಕಾರ್ತಿಕ್ ಎಸ್ – 15೦೦ಮೀ (ಪ್ರಥಮ), ಯತೀಶ- 3೦೦೦ ಮೀ (ದ್ವಿತೀಯ), ಕೀರ್ತಿಪ್ರಸಾದ್ – ತ್ರಿವಿಧ ಜಿಗಿತ(ಪ್ರಥಮ), ಯಶ್ವಂತ್‌ಗೌಡ ಎಂ.ಆರ್ – ಟ್ರಿ ಜಿಗಿತ (ತೃತೀಯ), ಕಾರ್ತಿಕ್ ಇ ಚಕ್ರ ಎಸೆತ(ತೃತೀಯ), ಅರುಣ್ ಕುಮಾರ್ ಎನ್.ಎಸ್ ಗುಂಡು ಎಸೆತ(ಪ್ರಥಮ), ಪೃಥ್ವೀಗೌಡ ಮತ್ತು ತಂಡ 4*1೦೦ ರಿಲೇ(ಪ್ರಥಮ), ಚಂದ್ರಶೇಖರ ಹೆಚ್.ಪಿ. ಮತ್ತು ತಂಡ ಖೋಖೋ (ಪ್ರಥಮ), ಪುನೀತ ಹೆಚ್.ಬಿ ಮತ್ತು ತಂಡ ಬಾಲ್ ಬ್ಯಾಡ್ಮಿಂಟನ್ (ಪ್ರಥಮ), ಯೋಗರಾಜ್ ಎಂ.ಪಿ. ಮತ್ತು ತಂಡ ಥ್ರೋಬಾಲ್(ಪ್ರಥಮ) ಸ್ಥಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಸಂಜನ ಹೆಚ್.ಸಿ – 8೦೦ಮೀ (ಪ್ರಥಮ), 3೦೦೦ಮೀ (ದ್ವಿತೀಯ), ಸಾನಿಕ ಹೆಚ್.ಪಿ – 8೦೦ಮೀಟರ್ (ತೃತೀಯ) 15೦೦ ಮೀ (ಪ್ರಥಮ), ವರಲಕ್ಷ್ಮಿ ಎನ್.ಟಿ – 3೦೦೦ಮೀ ನಡಿಗೆ (ದ್ವಿತೀಯ), ರಕ್ಷಿತ ಹೆಚ್.ಹೆಚ್ – 3೦೦೦ಮೀ ನಡಿಗೆ (ತೃತೀಯ), ಲಾವಣ್ಯ – ತ್ರಿವಿಧ ಜಿಗಿತ(ತೃತೀಯ), ಚಂದನ ಮತ್ತು ತಂಡ – ಖೋಖೋ (ಪ್ರಥಮ), ತೇಜಸ್ವಿನಿ ಮತ್ತು ತಂಡ ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, ಧನಲಕ್ಷ್ಮಿ ಮತ್ತು ತಂಡ ವಾಲಿಬಾಲ್ ದ್ವಿತೀಯ ಸ್ಥಾನ. ಪಡೆದಿದ್ದಾರೆ.

ಇವರಿಗೆ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರಾಮಸಂಜೀವಯ್ಯರವರನ್ನು ಶಾಲೆಯ ಮುಖ್ಯ ಶಿಕ್ಷಕರಾದ ತಜಮ್ಮುಲ್ ತನ್ವೀರ್ ಪಾಷ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಅಭಿನಂಧಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗಿರಿ, ಚಂದ್ರಪ್ಪ, ಸುಮ, ಅಜ್ರತಹಸೀನ್, ಸಂತೋಷ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!