ಭಾರತದಲ್ಲಿ ನಾಯಿಗಿರುವ ಸ್ವಾತಂತ್ರ್ಯವೂ ಮಹಿಳೆಗಿಲ್ಲ ಮತ್ತು ಮನೆಯ ಪ್ರೀತಿಯ ಶ್ವಾನಕ್ಕೆ ನಾಮಕರಣ ಮಾಡುವಂತೆ ಗಂಡನ ಮನೆಯಲ್ಲಿ ಹೆಣ್ಣುಮಕ್ಕಳ ತಂದೆತಾಯಿ ಇಟ್ಟ ಹೆಸರನ್ನು ಸದರದಿಂದ ಶಾಸ್ತ್ರ ಮೌಢ್ಯಗಳ ಹೆಸರಿನಲ್ಲಿಬದಲಾಯಿಸಲಾಗುತ್ತದೆ ಎಂದು ಎಂದಿನ ತಮ್ಮ ಹಾಸ್ಯ ಮೊನಚು ಮಿಶ್ರಿತ ಶೈಲಿಯಲ್ಲಿ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಅಧ್ಯಕ್ಷ ಬಿ.ಟಿ ವಿಶ್ವನಾಥ್ ಇಂದು ಪಿಇಎಸ್ ಕಾನೂನು ಕಾಲೇಜಿನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013 ರ ಸಂಬಂಧ ನೀಡಿದ ವಿಶೇಷ ಅತಿಥಿ ಉಪನ್ಯಾಸ ದಲ್ಲಿ ಅಭಿಪ್ರಾಯ ಪಟ್ಟರು.ವಿಧಾನ ಸಭೆ ಲೋಕಸಭೆಗಳಲ್ಲಿ ಅವರ ಪ್ರಮಾಣ ಶೇಕಡ ಐದೂ ಇಲ್ಲದಿರುವುದರತ್ತ ವಿದ್ಯಾರ್ಥಿನಿಯರ ಗಮನ ಸೆಳೆದರು.
ಒಂದು ಹೆಣ್ಣು ಶ್ವಾನದ ಹಿಂದೆ ಇಪ್ಪತ್ತೈದು ಗಂಡು ಶ್ವಾನಗಳು ಹಿಂಬಾಲಿಸಿದರೂ ಅದು ತನಗೊಪ್ಪುವ ಒಂರನ್ನು ಆ ಪೈಕಿ ಆರಿಸುತ್ತದೆ ಆ ಸ್ವಾತಂತ್ರ್ಯವೂ ನಿಮಗಿಲ್ಲ ಎಂದು ವಿದ್ಯಾ ರ್ಥಿನಿಯರನ್ನು ಛೇಡಿಸಿದ ಅವರು ಮರ್ಯಾದೆ ಹತ್ಯೆಗಳ ಭೀಭತ್ಸಜಾತಿ ಭಾರತದ ಲೋಕವನ್ನುವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು.
ಹೆಣ್ಣನ್ನು ಭಾರತದಲ್ಲಿ ಸರಕನ್ನಾಗಿ ಎರಡನೇ ದರ್ಜೆ ಪ್ರಜೆಯನ್ನಾಗಿ ಭೋಗದ ವಸ್ತುವಾಗಿ ನೋಡುತ್ತಿರುವ ಕಾರಣವೇ ಅವರ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಹಾದಿ ಮಾಡಿಕೊಟ್ಟಿದೆ ಎಂದು ಅವರು ಅಭಿಪ್ರಾಯಿಸಿದರು.
ಭಾರತೀಯ ದಂಡ ಸಂಹಿತೆ ಪೋಕ್ಸೋ ಕಾಯ್ದೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಇವಕ್ಕೆ ಕಠಿಣ ಶಿಕ್ಷೆ ಎಲ್ಲ ಇದ್ದರೂ ದೌರ್ಜನ್ಯ ಆ ಕಾರಣ ನಿಲ್ಲುತ್ತಿಲ್ಲ ಎಂದರು.
ಕುವೆಂಪು ರವರ ಮಂತ್ರ ಮಾಂಗಲ್ಯ ಕೆ.ಎಸ್.ಭಗವಾನರ ಶಂಕರ ಮತ್ತು ಪ್ರತಿಗಾಮಿತನ ತಾಪಿ ಧರ್ಮ ರಾವ್ ರವರು ಲೈಂಗಿಕ ಶಿಲ್ಪಗಳು ಮತ್ತು ದೇವಾಲಯಗಳು ಮತ್ತು ಎ. ಎನ್. ಮೂರ್ತಿ ರಾಯರ ದೇವರು ಪುಸ್ತಕಗಳನ್ನುಅಧ್ಯಯನ ಮಾಡಲು ವಿದ್ಯಾ ರ್ಥಿಗಳಿಗೆ ಸೂಚಿಸಿದರು.