ಕೇಂದ್ರದ ರಾಜ್ಯ ಜಲಶಕ್ತಿ ಸಚಿವರಾದ ಬಿಸ್ವೇಶ್ವರ ತುದ್ ಮತ್ತು ತಂಡದವರು ಕೆ ಆರ್ ಎಸ್ ಗೆ ಭೇಟಿ ನೀಡಿ ಡ್ರಿಪ್1 ಡ್ರಿಪ್2 ಕೆಲಸಗಳ ಕುರಿತು ಪರಿಶೀಲನೆ ನಡೆಸಿದರು .
ಕೆ ಆರ್‌ಎಸ್‌ಗೆ ಇವರ ತಂಡ ಆಗಮಿಸಿದಾಗ ಜಿಲ್ಲಾಧಿಕಾರಿ ಎಸ್ ಆಶ್ವತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸರಸ್ವತಿ ಹಾಗೂ ಉಪ ವಿಭಾಗಾಧಿಕಾರಿ ಶಿವಾನಂದಮೂರ್ತಿ ಅವರು ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಸಚಿವರು ಮಾತನಾಡುತ್ತ ಇಂದಿನ ದಿನಗಳಲ್ಲಿ ಅಣೆಕಟ್ಟು ನಿರ್ಮಾಣ ಮಾಡುವುದು ಕಷ್ಟದ ಕೆಲಸ, ಈ ಹಿನ್ನೆಲೆಯಲ್ಲಿ ನಮ್ಮ ಎಲ್ಲಾ ಅಣೆಕಟ್ಟುಗಳನ್ನು ಪುನಶ್ಚೇತನ ಕೆಲಸಗಳ ಮೂಲಕ ಅಭಿವೃದ್ಧಿಗೊಳಿಸಿ ಇನ್ನೂ ಹೆಚ್ಚಿನ ವರ್ಷಗಳ ಕಾಲ ಸಂರಕ್ಷಿಸಬೇಕಿದೆ ಎಂದು ಸೂಚಿಸಿದರು.
ಈ ಅಣೆಕಟ್ಟು ಸುಮಾರು 90 ವರ್ಷ ಹಳೆಯದಾಗಿದ್ದು ಅಣೆಕಟ್ಟನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಇನ್ನೂ ನೂರು ವರ್ಷಗಳ ಕಾಲ ಉಪಯುಕ್ತ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬಹುದು.
ವರ್ಲ್ಡ್ ಬ್ಯಾಂಕ್ ಹಾಗೂ ರಾಜ್ಯ ಸರ್ಕಾರ ಡ್ರಿಪ್ ಯೋಜನೆಯಡಿ 111 ಕೋಟಿ ವೆಚ್ಚ ಮಾಡುತ್ತಿದೆ. ಮುಖ್ಯವಾಗಿ ಅಣೆಕಟ್ಟಿನ ಗೇಟ್ ನ ಕೆಲಸಗಳನ್ನು ಪುನಶ್ಚೇತನ ಮಾಡಲಾಗುತ್ತಿದೆ ಎಂದು ಕೇಂದ್ರದ CWC ಅಧಿಕಾರಿ ಅವಸ್ತಿ ಹಾಗು ಗುಲಷನ್ ರಾಜ್ ಅವರು ವಿವರಿಸಿದರು.
ತಂಡದಲ್ಲಿ ಸಚಿವರೊಂದಿಗೆ ಸಂಸದರಾದ ಕೆ ಜೈಕುಮಾರ್, ಕಗೇನ್ ಮುರ್ಮಾ, ರಮೇಶ್ ಬಾಯಿ, ಲವೀಜ್ ಬಾಯಿ ದಡುಕ್, ನಾಗೇಶ್ವರ್ ರಾವ್, ಮುಕೇಶ್ ರಾಜ್ಪುಟ್, ಡಾ: ಸಾಕ್ಷಿ ಜಿ ಸ್ವಾಮಿ ಮಹಾರಾಜ್, ಸತ್ಯಪಾಲ್ ಸಿಂಗ್, ಸುರೇಶ್ ಕೋಡಿ, ಕುನಿಲ್ ಸಕಲ್ ದಿಲ್ ರಾಜ್ ಮುಂತಾದವರು ಇದ್ದರು.