ಮೈ ಶುಗರ್ ಕಾರ್ಖಾನೆಯ ಕಾರ್ಯಾರಂಭ ಮಾಡಲು ಸಿದ್ಧತೆಗಳು ಪ್ರಾರಂಭವಾಗಿದ್ದು, ಕಾರ್ಖಾನೆಯಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಕ್ಕರೆ ಕಾರ್ಖಾನೆಗೆ ಬೇಕಿರುವ ಕಬ್ಬನ್ನು ರೈತರಿಂದ ಖರೀದಿಸಲು ಮಾಡಿಕೊಂಡಿರುವ ವ್ಯವಸ್ಥೆ, ನೊಂದಣಿಯಾಗಿರುವ ರೈತರ ವಿವರವನ್ನು ಪಡೆದುಕೊಂಡರು.
ಮಹಾರಾಷ್ಟ್ರದ ಆರ್. ಬಿ ಟೆಕ್ನೋಕ್ರೇಟ್ಸ್ ಅಂಡ್ ರಿಕ್ಲೈಮರ್ಸ್ ಹಾಗೂ ಹೈದರಾಬಾದ್ ನ ಎಸ್ಸನಾರ್ ಪವರ್ ಟೆಕ್ ಇವರಿಗೆ ಕಾರ್ಖಾನೆಯ ವಿವಿಧ ವಿಭಾಗಗಳ ದುರಸ್ತಿ ಕೆಲಸಗಳ ಕುರಿತು ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಹಾಗೂ ಕೆಲಸಕ್ಕೆ ಸಿಬ್ಬಂದಿ ನಿಯೋಜನೆಯ ಬಗ್ಗೆ ಕಂಪನಿಯವರಿಂದ ಮಾಹಿತಿ ಪಡೆದುಕೊಂಡರು. ಕೆಲಸಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಗಳಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.