ಗಾಜಾ ನಗರದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಶಾಲೆ ಸದ್ಯ ನಿರಾಶ್ರಿತರ ಆಶ್ರಯ ಕೇಂದ್ರವಾಗಿತ್ತು ಎಂದು ಪ್ಯಾಲೆಸ್ತೀನ್ ಆರೋಗ್ಯ ಅಧಿಕಾರಿಗಳು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಕೇಂದ್ರ ಗಾಜಾ ನಗರದ ತಬೀನ್ ಶಾಲೆಯ ಮೇಲಿನ ದಾಳಿಯಲ್ಲಿ 47 ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಆಂಬ್ಯುಲೆನ್ಸ್ ಮತ್ತು ತುರ್ತು ಸೇವೆ ತಿಳಿಸಿದೆ. ಇಸ್ರೇಲ್ ಮಿಲಿಟರಿಯು ಈ ದಾಳಿಯನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಸುಮಾರು 10 ತಿಂಗಳ ಹಿಂದೆ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿದ್ದು, ಅಂದಿನಿಂದ ಗಾಜಾದಲ್ಲಿ ಶಾಲೆಗಳಲ್ಲಿ, ಇತರೆ ಸ್ಥಳಗಳಲ್ಲಿ ಜನರು ನೆಲೆಸಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಜುಲೈ 6ರ ಸುಮಾರಿಗೆ ಗಾಜಾದಲ್ಲಿನ 564 ಶಾಲೆಗಳಲ್ಲಿ 477 ನೇರವಾಗಿ ಯುದ್ಧದಲ್ಲಿ ಹಾನಿಗೊಂಡಿದೆ.
ಜೂನ್‌ನಲ್ಲಿ, ಕೇಂದ್ರ ಗಾಜಾದಲ್ಲಿ ಪ್ಯಾಲೆಸ್ತೀನ್ ನಿರಾಶ್ರಿತರ ಕೇಂದ್ರದ ಮೇಲೆ ಇಸ್ರೇಲ್ ವೈಮಾನಿಕ ದಾಳಿಯಿಂದಾಗಿ 12 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 33 ಮಂದಿ ಸಾವನ್ನಪ್ಪಿದ್ದಾರೆ.