Friday, October 11, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ : ಹಣವಿದ್ದವರಿಗೆ ಟಿಕೆಟ್

ಈಶ್ವರನ ಆಣೆ ನಿನಗೆ ಟಿಕೆಟ್ ಎಂದಿದ್ದ ದೇವೇಗೌಡರು ಹಣವಿದ್ದವನಿಗೆ ಟಿಕೆಟ್ ನೀಡಿ ನನಗೆ ಮೋಸ ಮಾಡಿದ್ರು ಎಂದು ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕೀಲಾರ ಜಯರಾಂ ನೊಂದು ನುಡಿದರು. ಮಂಡ್ಯದ ಮಂಜುನಾಥ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ತಮ್ಮ ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನೋಡು ಈಶ್ವರನ ಪುಸ್ತಕ ಓದುತ್ತಿದ್ದೇನೆ. ಈಶ್ವರನ ಆಣೆ, ಕೆ.ಟಿ.ಶ್ರೀಕಂಠೇಗೌಡರು ನಿಲ್ಲುವುದಿಲ್ಲ ಎಂದರೆ ನಿನಗೆ ವಿಧಾನಪರಿಷತ್ ಟಿಕೆಟ್ ಕೊಡುತ್ತೇನೆ ಎಂದಿದ್ದ ದೇವೇಗೌಡರು ಅಕ್ರಮವಾಗಿ ಹಣ ಮಾಡಿದ ವ್ಯಕ್ತಿಗೆ ಟಿಕೆಟ್ ಕೊಟ್ಟು ನನಗೆ ಮೋಸ ಮಾಡಿದ್ರು ಎಂದರು.

ನಾನು 35 ವರ್ಷದಿಂದ ದೇವೇಗೌಡರ ನೇತೃತ್ವದ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಕೆ.ಟಿ. ಶ್ರೀಕಂಠೇಗೌಡರು ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದರೆ ಈಶ್ವರ ಆಣೆ ನಿನಗೆ ಟಿಕೆಟ್ ಎಂದಿದ್ದರು.

ನಾನು ಕೂಡ ಪ್ರಧಾನಿಯಾಗಿದ್ದವರು ಈಶ್ವರನ ಮೇಲೆ ಆಣೆ ಮಾಡಿದ್ದಾರೆ ಎಂದು ತಿಳಿದು ಮಂಡ್ಯ,ಮೈಸೂರು, ಹಾಸನ ಎಲ್ಲೆಡೆ ಸ್ನೇಹಿತರ ಸಭೆ ಮಾಡಿ 23,000 ಮತದಾರರ ನೋಂದಣಿ ಮಾಡಿಸಿದೆ.ಎಚ್.ಡಿ.ಕುಮಾರಸ್ವಾಮಿ ಎರಡು- ಮೂರು ಬಾರಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಚುನಾವಣೆಗೆ ದುಡ್ಡು ರೆಡಿ ಮಾಡಿಕೊಳ್ಳಿ ಎಂದಿದ್ದರು.

ಆದರೆ ನನಗೆ ಟಿಕೆಟ್ ನೀಡದೇ ಜನರಿಗೆ ಸೈಟು ನೀಡದೆ ಅಕ್ರಮವಾಗಿ ಹಣ ಮಾಡಿರುವ ವ್ಯಕ್ತಿಗೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಹೆಚ್.ಕೆ. ರಾಮು ಅವರು ಮೂರು ಬಾರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಲು ಸಹಕರಿಸಿದ್ದೇನೆ. ಅವರಿಗೆ ಟಿಕೆಟ್ ಎಂದು ಗೊತ್ತಾದ ಸಂದರ್ಭದಲ್ಲಿ ಈ ಬಗ್ಗೆ ಕೇಳಿದಾಗ,ನಾನು ಟಿಕೆಟ್ ಕೇಳಿಲ್ಲ. ದೇವೇಗೌಡರೇ ನನಗೆ ಹೇಳಿ ಕಳಿಸಿದ್ದಾರೆ ಎಂದು ಸುಳ್ಳು ಹೇಳಿದ್ದರು ಎಂದರು.


ನಾನು ಈ ಬಗ್ಗೆ ಮರಿತಿಬ್ಬೇಗೌಡರನ್ನು ಕರೆದುಕೊಂಡು ಹೋಗಿ ದೇವೇಗೌಡರನ್ನು ಕೇಳಿದಾಗ, ಅವನ್ಯಾರೋ ಚೆನ್ನಾಗಿ ದುಡ್ಡು ಖರ್ಚು ಮಾಡ್ತಾನೆ ಅಂತ ಒಬ್ಬ ವ್ಯಕ್ತಿಯನ್ನ ಕರೆತಂದಿದ್ದ. ನಾನು ಎರಡನೇ ದರ್ಜೆ ಗುಮಾಸ್ತ, ಹೆಂಗೆ ಕೋಟ್ಯಾಂತರ ಹಣ ಖರ್ಚು ಮಾಡ್ತಾನೆ ಅಂತ ನಮ್ಮ ಎಲ್ಲ ಎಂಎಲ್ಎ ಕರೆದು ತೀರ್ಮಾನ ಮಾಡುತ್ತೇನೆ ಎಂದು ಹೇಳಿ ಕಳಿಸಿದೆ ಎಂದಿದ್ದರು.

ಆದರೆ ಕೊನೆಗೂ ಅಕ್ರಮವಾಗಿ ಹಣ ಮಾಡಿದವರಿಗೆ ಟಿಕೆಟ್ ನೀಡಿ ಪಕ್ಷದ ನಿಷ್ಠಾವಂತ ನಾದ ನನಗೆ ಅನ್ಯಾಯ ಮಾಡಿದರು. ಇಂತಹ ಹಣವಿರುವ ವ್ಯಕ್ತಿಗೆ ಮತ ನೀಡಿದರೆ ಗೌರವ ಉಳಿಯುತ್ತದೆಯೇ ಪದವೀಧರ ಮತದಾರರನ್ನು ಯೋಚಿಸಬೇಕು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!