Saturday, May 25, 2024

ಪ್ರಾಯೋಗಿಕ ಆವೃತ್ತಿ

ಕನ್ನಡಿಗ ಜಫ್ರುಲ್ಲಾಖಾನ್‌ಗೆ ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿ

ಶಾಂತಿ ಸೌಹಾರ್ದತೆಗಾಗಿ ಹೆಚ್.ಎಂ.ಸಿ. ಯುನೈಟೆಡ್ ವತಿಯಿಂದ ನೀಡಲಾಗುವ “ಇಂಟರ್‌ನ್ಯಾಷನಲ್ ಪೀಸ್” ಅವಾರ್ಡ್‌ ಗೆ ಮಂಡ್ಯದ ಮಹಮದ್ ಜಫ್ರುಲ್ಲಾಖಾನ್ ಅವರು ಭಾಜನರಾಗಿದ್ದಾರೆ.

ಇತ್ತೀಚೆಗೆ ದುಬೈನ ಮ್ಯಾರಿಯೇಟ್ ಅಂತರಾಷ್ಟ್ರೀಯ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಜಫ್ರುಲ್ಲಾಖಾನ್ ಅವರಿಗೆ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ (ಇಂಟರ್ ನ್ಯಾಷನಲ್ ಪೀಸ್ ಅವಾರ್ಡ್)ನೀಡಿ ಗೌರವಿಸಲಾಯಿತು.

ಜಫ್ರುಲ್ಲಾಖಾನ್ ರವರು ಪ್ರತಿಯೊಂದು ಸಮುದಾಯದೊಂದಿಗೆ ಬೆರೆತು ಅವರ ಕಷ್ಟ- ಸುಖಗಳಲ್ಲಿ ಭಾಗಿಯಾಗಿದ್ದು, ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿದ್ದರು.

ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.

ಹಲವು ಧರ್ಮಗಳ ಧರ್ಮದರ್ಶಿಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಜಫ್ರುಲ್ಲಾಖಾನ್ ಅವರು ವಿವಿಧ ಧರ್ಮಗಳ ದೇವಸ್ಥಾನಗಳ ಅಭಿವೃದ್ಧಿಗೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ.

ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಪ್ರಮುಖ ಪಾತ್ರ ವಹಿಸುವ ಇವರು, ಬಡ ವರ್ಗಗಳ ಜನ ಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ.

ಈ ಎಲ್ಲಾ ಸೇವೆಗಳನ್ನು ಗಮನಿಸಿ ಹೆಚ್.ಎಂ.ಸಿ. ಯುನೈಟೆಡ್ ಅಂತರಾಷ್ಟ್ರೀಯ ಸಂಸ್ಥೆ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!