ಪಾಂಡವಪುರ ಟಿಎಪಿಸಿಎಂಎಸ್ ಲೋಡಿಂಗ್ ಅನ್ಲೋಡಿಂಗ್ ಕಾರ್ಮಿಕರು ಕರ್ನಾಟಕ ಜನಶಕ್ತಿ ರಾಜ್ಯ ಸಮ್ಮೇಳನದ ಪೋಸ್ಟರ್ ಹಿಡಿದು ಗಮನಸೆಳೆದರು.
ಕರ್ನಾಟಕ ಜನಶಕ್ತಿ ಸಂಘಟನೆಯ ಮೂರನೇ ರಾಜ್ಯ ಸಮ್ಮೇಳನವು ಜುಲೈ 3 ಮತ್ತು 4 ರಂದು ರಾಯಚೂರು ಜಿಲ್ಲೆಯಲ್ಲಿ ನಡೆಯಲಿದ್ದು, ಸಂಘಟನೆಯ ಸದಸ್ಯತ್ವ ಪಡೆದಿರುವ ಲೋಡಿಂಗ್ ಅನ್ಲೋಡಿಂಗ್ ಕಾರ್ಮಿಕರು ಜನಶಕ್ತಿಯ ಪೋಸ್ಟರ್ ಹಿಡಿದು ಸಮ್ಮೇಳನಕ್ಕೆ ಬೆಂಬಲ ಸೂಚಿಸಿದರು.
ರಾಜ್ಯದ ಬಡವರಪರ ಹಾಗೂ ನೊಂದ ಕಾರ್ಮಿಕರ ಪರ ನಿರಂತರ ಹೋರಾಟ ನಡೆಸುತ್ತಿರುವ ಕರ್ನಾಟಕ ಜನಶಕ್ತಿಯು ಇಂದು ರಾಜ್ಯದಲ್ಲಿ ಹೊಸ ಹೋರಾಟದ ಅಲೆಯನ್ನೇ ಸೃಷ್ಟಿಸುತ್ತಿದೆ.
ಸಮಾಜದ ಶಾಂತಿ ಮತ್ತು ಹಿತದೃಷ್ಟಿಯಿಂದ ಸವಿಸ್ತಾರವಾಗಿ ಕೆಲಸ ಮಾಡುತ್ತಿರುವ ಈ ಸಂಘಟನೆಯ ಬಹಳ ಬದ್ಧತೆ ಮತ್ತು ಶಿಸ್ತಿನ ಕಾರ್ಯಕರ್ತರನ್ನು ಒಳಗೊಂಡಿದೆ.