ಸೇವಾ ಮನೋಭಾವದಿಂದ ನಿರಂತರವಾಗಿ ಬೆಳವಣಿಗೆ ಹೊಂದಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಕ್ಲಬ್ ಸಂಸ್ಥೆಯ ಸಾಮಾಜಿಕ ಸೇವೆ ಅನನ್ಯ ಎಂದು ಜಿಲ್ಲಾ ರಾಜ್ಯಪಾಲರಾದ ಡಾ. ಪ್ರಭಾಮೂರ್ತಿ ತಿಳಿಸಿದರು.
ಮಂಡ್ಯ ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಮಂಡ್ಯ ಸೆಂಟ್ರಲ್ ಸಂಸ್ಥೆಯ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಸಂಸ್ಥೆಯು ಸಾರ್ವಜನಿಕರಿಗೆ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಾ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದರು.
ಸಂಸ್ಥೆಗಳು ಪ್ರಾರಂಭವಾಗುವುದರಿಂದ ಹಾಗೂ ಸದಸ್ಯರಾಗುವುದರಿಂದ ಹೆಚ್ಚು ಸಾರ್ವಜನಿಕರಿಗೆ ಸೇವೆ ಮಾಡುವುದಕ್ಕೆ ಸಹಕಾರಿಯಾಗುತ್ತದೆ. ಈ ಸಂಸ್ಥೆ 23 ಸದಸ್ಯರನ್ನು ಹೊಂದಿದ್ದು, ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಸೇವೆಯನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂದರು.
ಯಾವುದೇ ಕಾರಣಗಳಿಂದ ಸಂಸ್ಥೆಯನ್ನು ಮುಚ್ಚುವಂತಹ ಕೆಲಸ ಮಾಡಬಾರದು. ಆ ಸಂಸ್ಥೆಯ ಮೂಲಕ ಅಭಿವೃದ್ಧಿಯ ಚಟುವಟಿಕೆಗಳು ಮಾಡಬೇಕು. ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಬೇಕು ಎಂದರು.
ನಾಗಮಂಗಲದಲ್ಲಿ ಎರಡನೇ ಲಯನ್ಸ್ ಕ್ಲಬ್ ಸಂಸ್ಥೆ ಪ್ರಾರಂಭವಾಗುತ್ತಿದ್ದು, ಈ ಹೊಸ ಕ್ಲಬ್ ನಲ್ಲಿ 60 ಜನ ಸದಸ್ಯರಾಗಿದ್ದಾರೆ. ಈ ಸಂಸ್ಥೆಯು ಕೂಡ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಮಾಡುತ್ತ ಅಭಿವೃದ್ಧಿಯತ್ತ ಸಾಗಲಿ ಎಂದು ಶುಭಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಪಾಲ ಕೆ. ದೇವೇಗೌಡ, ಮೊದಲನೆಯ ಉಪ ರಾಜ್ಯಪಾಲ ಸುರೇಶ್ ರಾಮು, ಎರಡನೆಯ ಉಪ ಜಿಲ್ಲಾ ರಾಜ್ಯಪಾಲ ಎನ್ ಮೋಹನ್ ಕುಮಾರ್ , ಅಧ್ಯಕ್ಷ ಹೆಚ್. ಪ್ರಕಾಶ್ , ಸಂಸ್ಥಾಪಕ ಅಧ್ಯಕ್ಷ ಕೆ. ಚೇತನ್ ಕೃಷ್ಣ , ಡಾ.ಸುಂದರಮೂರ್ತಿ, ಎನ್.ಕೃಷ್ಣ ಗೌಡ, ಕೆ. ಎಸ್ ಸುನಿಲ್ ಕುಮಾರ್, ಎಸ್ .ಪಿ ಆದರ್ಶ, ಹೆಚ್.ಆರ್ ನಾಗಭೂಷಣ್, ಕೆ ಎನ್ ಪುನೀತ್ ಕುಮಾರ್, ಎನ್ ಸುಬ್ರಹ್ಮಣ್ಯ, ಸಿದ್ದಪ್ಪ ,ಸಿ.ಎ ಅನಿಲ್ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.