Thursday, June 13, 2024

ಪ್ರಾಯೋಗಿಕ ಆವೃತ್ತಿ

ತಂಬಾಕು ಬಳಕೆಯಿಂದ ಲಕ್ಷಾಂತರ ಜನರ ಸಾವು: ಕೆ.ಟಿ ಹನುಮಂತು

ತಂಬಾಕು ಉತ್ಪನ್ನಗಳ ಬಳಕೆಯಿಂದ ಪ್ರತಿ ವರ್ಷ 80 ಲಕ್ಷಕ್ಕೂ ಹೆಚ್ಚು ಜನ ಮರಣಹೊಂದುತ್ತಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆಯ ಜೀವನ ಶೈಲಿ ಅಳವಡಿಸಿಕೊಂಡು ತಂಬಾಕು ಮುಕ್ತ ಜೀವನ ನಡೆಸಬೇಕೆಂದು ಅಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಕೆ ಟಿ ಹನುಮಂತು ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಇಂಟರ್ನ್ಯಾಷನಲ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಹಾಗೂ ವಿನಾಯಕ ಐಟಿಐ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ,”ವಿಶ್ವ ತಂಬಾಕು ರಹಿತ ದಿನ”ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೆರುಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಸಲಹೆಗಾರರಾದ ತಿಮ್ಮರಾಜು ಮಾತನಾಡಿ, ತಂಬಾಕು ಉದ್ದಿಮೆಗಳು ತಮ್ಮ ಮುಂದಿನ ಗ್ರಾಹಕರನ್ನಾಗಿ ಯುವಕರನ್ನು ಸೆಳೆಯಲು ಹಲವು ಜಾಹೀರಾತುಗಳ ಮೂಲಕ ಚಲನಚಿತ್ರದ ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರರಿಂದ ಪರೋಕ್ಷವಾಗಿ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಯುವಕರು ವಿವೇಚನೆಯಿಂದ ಜೀವನ ನಡೆಸಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಡಿ ಟಿ ಮಂಜುನಾಥ್ ಮಾತನಾಡಿ ಯುವಕರು ತಮ್ಮ ಭವಿಷ್ಯವನ್ನು ಉತ್ತಮಗೊಳಿಸಲು ತಂಬಾಕು ಉತ್ಪನ್ನಗಳಿಗೆ ದಾಸರಾಗದೆ ಉಜ್ವಲ ಭವಿಷ್ಯ ರೂಪಿಸಿ ಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್, ಅಲಯನ್ಸ್ ಸಂಸ್ಥೆಯ ಚಂದ್ರಶೇಖರ, ಸನ್ಮತಿ, ಹೊಂಬೆಗೌಡ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರು,ಐಟಿಐ ಕಾಲೇಜಿನ ಉಪನ್ಯಾಸಕ ಸೋಮರಾಜು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!