Friday, April 19, 2024

ಪ್ರಾಯೋಗಿಕ ಆವೃತ್ತಿ

ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅವ್ಯವಹಾರ: ಏಕಾಂಗಿ ಪ್ರತಿಭಟನೆ

ಪಾಂಡವಪುರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ನಿವೇಶನದಾರರಿಂದ ಹೆಚ್ಚುವರಿ ಹಣ ವಸೂಲಿ ಹಾಗೂ ಸಂಘದಲ್ಲಿ ಕೆಲಸ ನಿರ್ವಹಿಸುತ್ತಿದ್ದ ನನಗೆ ಬಾಕಿ ವೇತನವನ್ನು ನೀಡಿಲ್ಲ ಎಂದು ಆರೋಪಿಸಿ ಸಂಘದ ಬಡಾವಣೆಯಲ್ಲಿ ಮಾಜಿ ನೌಕರ ಹಿರೇಮರಳಿ ಹೆಚ್.ಜಿ.ವೇಣುಗೋಪಾಲ್ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ಪಾಂಡವಪುರ ತಾಲ್ಲೂಕಿನ ಹರಳಹಳ್ಳಿ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯಲ್ಲಿ ಏಕಾಂಗಿಯಾಗಿ ಧರಣಿ ನಡೆಸುತ್ತಿರುವ ಅವರು,ಸಾಕಷ್ಟು ಅವ್ಯವಹಾರ ನಡೆದಿರುವ ಪಾಂಡವಪುರ ಗೃಹ ನಿರ್ಮಾಣ ಸಹಕಾರ ಸಂಘವನ್ನು ಕೂಡಲೇ ಸಹಕಾರ ಇಲಾಖೆ ಅಧಿಕಾರಿಗಳು ಸೂಪರ್ ಸೀಡ್ ಮಾಡಬೇಕೆಂದು ಒತ್ತಾಯಿಸಿದರು.

ಹಲವು ದಾಖಲಾತಿಗಳನ್ನು ಪ್ರದರ್ಶಿಸಿ, ಬಡಾವಣೆ ನಿವೇಶನ ಹಂಚಿಕೆ ಸಂದರ್ಭದಲ್ಲಿ ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ವಸೂಲಿ‌ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆ. ಸಂಘದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದರೂ ಬಾಕಿ ವೇತನವನ್ನು ಉದ್ದೇಶಪೂರ್ವಕವಾಗಿ ನೀಡುತ್ತಿಲ್ಲ.

ಇಷ್ಟೊಂದು ಅವ್ಯವಹಾರ ನಡೆದಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ತಕ್ಷಣ ತನಿಖೆ ನಡೆಸಿ, ಸಂಘವನ್ನು ಸೂಪರ್ ಸೀಡ್ ಮಾಡಬೇಕು ಹಾಗೂ ನನಗೆ ನ್ಯಾಯ ನೀಡಬೇಕು ಎಂದು ವೇಣುಗೋಪಾಲ್ ಒತ್ತಾಯಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!