Friday, September 20, 2024

ಪ್ರಾಯೋಗಿಕ ಆವೃತ್ತಿ

ತಾಯಂದಿರ ದಿನ : ಜಗತ್ತಿನಾದ್ಯಂತ ಏಕೆ ಆಚರಿಸಲಾಗುತ್ತದೆ?

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಭಾರತದಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರ ಅಸ್ತಿತ್ವ ಮತ್ತು ಜೀವನದಲ್ಲಿ ಅವರ ಮಹತ್ವವನ್ನು ಗೌರವಿಸಲು ಈ ದಿನವನ್ನು ಸ್ಮರಿಸಲಾಗುತ್ತದೆ.

ತಾಯಂದಿರು ಮಕ್ಕಳ ಜೀವನದಲ್ಲಿ ವಿಭಿನ್ನ ರೀತಿಯಲ್ಲಿ ಬೆನ್ನುಲುಬಾಗಿ ಮತ್ತು ಮಹತ್ವದ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಆರೈಕೆ ಮಾಡುವುದರಿಂದ ಪ್ರಾರಂಭಿಸಿ ನಮ್ಮನ್ನು ಜೀವನದಲ್ಲಿ ರಕ್ಷಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ತಾಯಂದಿರು ಮಕ್ಕಳಿಗೆ ಸ್ನೇಹಿತರಾಗುತ್ತಾರೆ ಮತ್ತು ಮಾರ್ಗದರ್ಶಕರಾಗುತ್ತಾರೆ. ಪ್ರಪಂಚದಾದ್ಯಂತ 50 ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಮಾತೃತ್ವದ ಆಚರಣೆಯು ಬಹಳ ಹಿಂದಿನಿಂದಲೂ ಮಾನವ ಇತಿಹಾಸದ ಭಾಗವಾಗಿದೆ, ಆದರೆ 1908 ರವರೆಗೆ ಯುನೈಟೆಡ್ ಸ್ಟೇಟ್ಸ್ ಸಂಪೂರ್ಣವಾಗಿ ತಾಯಂದಿರಿಗೆ ಮೀಸಲಾದ ದಿನವನ್ನು ಮೀಸಟ್ಟಿತು. 1905 ರಲ್ಲಿ ಅನ್ನಾ ಜಾರ್ವಿಸ್ ಎಂಬ ಅಮೇರಿಕನ್ ಮಹಿಳೆಯು, ಅವರ ತಾಯಿ ನಿಧನರಾದ ನಂತರ, ತಾಯಂದಿರು ಮಾಡಿದ ಕೆಲಸ ಮತ್ತು ತ್ಯಾಗವನ್ನು ಗೌರವಿಸಲು ಒಂದು ದಿನವನ್ನು ತಾಯಂದಿರಿಗೆ ಮೀಸಲಿಡಲು ಬಯಸಿದ್ದರು. ಇದರ ಪರಿಣಾಮವಾಗಿ, ಅವರು ಮೇ 1908 ರಲ್ಲಿ ವೆಸ್ಟ್ ವರ್ಜೀನಿಯಾದ ಗ್ರಾಫ್ಟನ್‌ನಲ್ಲಿ ಮೊದಲನೇ ಬಾರಿಗೆ ಔಪಚಾರಿಕವಾಗಿ ತಾಯಿಯ ದಿನಾಚರಣೆಯನ್ನು ಆಚರಿಸಿದರು.

ಬಹುಬೇಗ ಈ ದಿನಾಚರಣೆಯು ಪೂರ್ಣ ಪ್ರಮಾಣದ ಚಳುವಳಿಯಾಗಿ ಬೆಳೆಯಿತು, ಅನ್ನಾ ಮತ್ತು ಅವರ ಸ್ನೇಹಿತರು ಯುನೈಟೆಡ್ ಸ್ಟೇಟ್ಸ್ನಲ್ಲಿನ ಪ್ರಮುಖ ವ್ಯಕ್ತಿಗಳಿಗೆ ತಾಯಿಂದರ ದಿನವನ್ನು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಬೇಕೆಂದು ಒತ್ತಾಯಿಸಿ ಪತ್ರ ಬರೆದರು. 1911 ರ ಹೊತ್ತಿಗೆ, ಇದು ದೇಶದ ಪ್ರತಿಯೊಂದು ರಾಜ್ಯಕ್ಕೂ ಹರಡಿತು.

ಅಂತಿಮವಾಗಿ, 1914 ರಲ್ಲಿ, ಆಗಿನ ಯುಎಸ್ ಅಧ್ಯಕ್ಷ ವುಡ್ರೋ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವಾಗಿ ಆಚರಿಸಲು ಘೋಷಿಸಿದರು. ಈ ತಾಯಂದಿರ ದಿನದ ಆಚರಣೆಗಳು ತ್ವರಿತವಾಗಿ ರಾಷ್ಟ್ರೀಯ ಗಡಿಗಳನ್ನು ಮೀರಿ ಮತ್ತು ಇತರ ದೇಶಗಳಿಗೆ ಹರಡಿತು. ಆದಾಗ್ಯೂ, ತಾಯಂದಿರ ದಿನವನ್ನು ವಿವಿಧ ದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ.

ಭಾರತದಲ್ಲಿ ಈ ವರ್ಷ ಮೇ 8 ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಭಾರತದಲ್ಲಿ ಮೇ ತಿಂಗಳ ಎರಡನೇ ಭಾನುವಾರದಂದು ಅಚರಿಸಲಾಗುವುದು.

ತಾಯಿಯ ಸಬಂಧವನ್ನು ವಿವಿಧ ರೀತಿಯಲ್ಲಿ ಭಾರತದಲ್ಲಿ ಗೌರವಿಸಲಾಗುತ್ತದೆ. ಅನೇಕ ಜನರು ತಮ್ಮ ಅಮ್ಮಂದಿರೊಂದಿಗೆ ತಮ್ಮ ಸಂಬಂಧವನ್ನು ಬಲಪಡಿಸಲು ತಾಯಿಯ ದಿನವನ್ನು ಆಚರಿಸುತ್ತಾರೆ, ಅನೇಕ ಜನರು ತಮ್ಮ ತಾಯಂದಿರಿಗೆ ಉಡುಗೊರೆಗಳನ್ನು ನೀಡಲು ಬಯಸುತ್ತಾರೆ. ಮತ್ತೆ ಕೆಲವರು ತಮ್ಮ ತಾಯಂದಿರೊಂದಿಗೆ ವಿಶೇಷವಾದದ್ದನ್ನು ಮಾಡಲು ಪ್ರಯತ್ನಿಸುತ್ತಾರೆ. ಕೆಲವರು ಚಲನಚಿತ್ರಗಳಿಗೆ ಹೋಗುವುದು, ವಿಹಾರಗಳಿಗೆ ಹೋಗುವುದು, ಕೆಲವರು ಪ್ರವಾಸ ಮಾಡುವುದು ಇವೇ ಮೊದಲಾದ ರೀತಿಯಲ್ಲಿ ಆಚರಿಸುತ್ತಾರೆ.

ಇಂದು ವಿಶ್ವ ತಾಯಂದಿರ ದಿನವಾಗಿದ್ದರಿಂದ, ಸಾಮಾಜಿಕ ಜಾಲತಾಣಗಳಾದ, ಫೇಸ್ ಬುಕ್, ಟಿಟ್ವರ್, ಇನ್ಸಾಟಾಗ್ರಾಮ್, ವಾಟ್ಸ್ ಪ್ ಗಳ ಸ್ಟೇಟಸ್ ನಲ್ಲಿ ಹಲವರು ತಮ್ಮ ತಾಯಿ ಮಕ್ಕಳ ಸಂಬಂಧದ ಬಗ್ಗೆ ವಿಡಿಯೋ, ಪೋಟೊ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ತಾಯಿ ಜೊತೆಗಿರುವ ಪೋಟೋಗಳು ಸಾಕಷ್ಟು ವೈರಲ್ ಆಗಿದ್ದು, ಬಹಳಷ್ಟು ಜನ ತಾಯಿಯ ಜೊತೆಗಿದ ಬಾಲ್ಯದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!