Sunday, March 3, 2024

ಪ್ರಾಯೋಗಿಕ ಆವೃತ್ತಿ

ಜೀತ ಮಾಡಿ ರೂಢಿ ಇರುವುದರಿಂದ ಜೀತದ ಬಗ್ಗೆ ಮಾತನಾಡುತ್ತಾರೆ: ಅನ್ನದಾನಿಗೆ ಟಾಂಗ್ ನೀಡಿದ ನರೇಂದ್ರಸ್ವಾಮಿ

ಜೀತ ಮಾಡಿ ರೂಢಿ ಇರುವುದರಿಂದ ಜೀತದ ಬಗ್ಗೆ ಮಾತನಾಡುತ್ತಾರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನಗೆ ಹಣ ಕೊಟ್ಟಿದ್ದಾರೆಂದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರಮಾಣ ಮಾಡಿಸಲಿ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಪರೋಕ್ಷವಾಗಿ ಮಾಜಿ ಶಾಸಕ ಅನ್ನದಾನಿ ಗೆ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀತ ಮಾಡಿ ರೂಡಿ ಇರುವುದರಿಂದ ಜೀತದ ಬಗ್ಗೆ ಮಾತನಾಡುತ್ತಾರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನಗೆ ಹಣ ಕೊಟ್ಟಿದ್ದಾರೆಂದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರಮಾಣ ಮಾಡಿಸಲಿ, ಶಾಸಕ ಸ್ಥಾನ ಅನರ್ಹಗೊಂಡಾಗ ಕಾನೂನು ಹೋರಾಟ ಮಾಡಿದ ಪರಿಣಾಮ ಅನರ್ಹಗೊಂಡ ಎಂಟು ತಿಂಗಳು ಪುನಃ ಅಧಿಕಾರ ಅನುಭವಿಸುವಂತೆ ನ್ಯಾಯ ಸಿಕ್ಕಿತ್ತು. ಮಾಜಿ ಶಾಸಕ ಬಾಯಿಗೆ ಬಂದAತೆ ಮಾತನಾಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೇ ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕರು ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಬೇಕು, ನಾನು ಮಾತನಾಡಿದರೇ ಮೂಲಕ್ಕೆ ಹೋಗಬೇಕಾಗುತ್ತದೆ, ನಾನು ಎಂದಿಗೂ ಅವರ ತಂದೆ ಮತ್ತು ವೈಯಕ್ತಿಕವಿಚಾರದ ಬಗ್ಗೆ ಮಾತನಾಡಿಲ್ಲ, ಇದೇ ರೀತಿ ಮುಂದುವರೆಸಿದರೇ ವಿದ್ಯಾರ್ಥಿ ದೆಸೆಯಿಂದ ಹಿಡಿದು ಇಲ್ಲಿಯವರೆಗೂ ಎಲ್ಲಾ ವಿಚಾರಗಳನ್ನು ಬಹಿರಂಗ ಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

2007ರಲ್ಲಿ ಈಗಿರುವ ಅಂಬೇಡ್ಕರ್ ಭವನದ ಜಾಗವನ್ನು ಖಾಸಗಿ ಬಸ್ ನಿಲ್ದಾಣಕ್ಕೆ ನೀಡಲಾಗಿತ್ತು. 2008ರ ನನ್ನ ಅಧಿಕಾರದ ಅವಧಿಯಲ್ಲಿ ಪುರಸಭೆಯಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗವನ್ನು ಕಾಯ್ದಿರಿಸಿ ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗಿದೆ, ಈ ಬಗ್ಗೆ ಸರ್ಕಾರವೇ ಉತ್ತರ ನೀಡಿದೆ ಎಂದರು.

ಹಿಂದಿನ ಶಾಸಕರು ಯಾವುದೇ ಒಂದು ಯೋಜನೆಯನ್ನು ಪೂರ್ಣಗೊಳಿಸಲ್ಲಿಲ್ಲ, ಹೇಳಿಕೊಳ್ಳುವ ಒಂದು ಯೋಜನೆಯನ್ನು ಕೂಡ ತಂದಿಲ್ಲ, ಮತದಾರರು ನನ್ನ ನಾಯಕತ್ವವನ್ನು ನೋಡಿ ಗೆಲ್ಲಿಸಿದ್ದಾರೆ, ಈಗಿನ ಮಾಜಿ ಶಾಸಕನ ವಿರುದ್ದವಾಗಿಯೇ ಪಕ್ಷೇತರವಾಗಿ ಗೆದ್ದಿರುವುದು ಎನ್ನುವುದನ್ನು ಮರೆಯಬಾರದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ ಶಿವಮಾದೇಗೌಡ, ಕಲ್ಕುಣಿ ಗ್ರಾ,ಪಂ ಅಧ್ಯಕ್ಷ ಪರಮೇಶ್, ಸೇರಿದಂತೆ ಗ್ರಾ,ಪಂ ಸದಸ್ಯರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!