ಜಿಸಿಬಿ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ “ಓ ಮೈ ಲವ್” ಚಲನಚಿತ್ರ ಜುಲೈ 15 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಸ್ಮೈಲ್ ಶ್ರೀನು ತಿಳಿಸಿದರು.
ಮಂಡ್ಯದಲ್ಲಿ ಚಿತ್ರತಂಡದ ಜೊತೆಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಸಿನಿಮಾ ಹಾಡುಗಳು ಟೀಸರ್ ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದು, ಜನರು ಮನಸ್ಸು ಸೆಳೆದಿದೆ.ಚಿತ್ರದ ನಾಯಕರಾಗಿ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಹಾಗೂ ಚಿತ್ರದ ನಾಯಕಿಯಾಗಿ ಕೀರ್ತಿ ಕಲ್ಕೆರಿ ನಟಿಸಿದ್ದು ಚಿತ್ರ ಉತ್ತಮವಾಗಿ ಮೂಡಿಬಂದಿದೆ.ಚಿತ್ರ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ ಎಂದರು.
ನಾಯಕ ನಟ ಅಕ್ಷಿತ್ ಶಶಿಕುಮಾರ್ ಮಾತನಾಡಿ, ಜಿ.ಸಿ.ಬಿ. ಪ್ರೊಡಕ್ಷನ್ ಬ್ಯಾನರ್‌ನಡಿ ಜಿ.ರಾಮಾಂಜಿನಿ ಅವರು ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.ನಾನು ಹೊಸ ನಟ ಆದರೂ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸ್ಮೈಲ್ ಶ್ರೀನು ಉತ್ತಮ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ನಾಲ್ಕು ಫೈಟ್ಸ್ ಇದ್ದು ಆರು ಹಾಡುಗಳಿವೆ. ಎಲ್ಲಾ ಹಾಡುಗಳಿಗೆ ಡಾ.ವಿ.ನಾಗೇಂದ್ರ, ಪ್ರಸಾದ್ ಸಾಹಿತ್ಯ ರಚಿಸಿದ್ದು, ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ.ರಾಜ್ಯದ ಜನತೆ ನಮ್ಮ ತಂದೆಗೆ ಪ್ರೋತ್ಸಾಹ ನೀಡಿದಂತೆ ನನಗೂ ನಿಮ್ಮ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದರು.
ನಾಯಕಿ ಕೀರ್ತಿ ಕಲ್ಕೆರಿ ಮಾತನಾಡಿ, ನನಗೆ ಇದು ಎರಡನೇ ಚಿತ್ರವಾಗಿದ್ದು ತುಂಬಾ ಪರಿಶ್ರಮದಿಂದ ಚಿತ್ರ ನಿರ್ಮಾಣ ಮಾಡಿದ್ದಾರೆ.ಜನರು ಚಿತ್ರಮಂದಿರಕ್ಕೆ ಬಂದು ವೀಕ್ಷಣೆ ಮಾಡಬೇಕು.
ಎಸ್.ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್ ಹಾಗೂ ಸಂಗೀತಾ ದೀಪಿಕಾ ಆರಾಧ್ಯ, ಪೃಥ್ವಿರಾಜ್, ಆನಂದ್, ಶಿಲ್ಪಾ ರವಿ, ಭಾಗ್ಯಶ್ರೀ ರಾಮ್‌ಕುಮಾರ್ ಸೇರಿದಂತೆ ಹಲವರಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಗರಾಜ್ ಹಾಗೂ ರುದ್ರೇಗೌಡ ಹಾಜರಿದ್ದರು.