Saturday, June 15, 2024

ಪ್ರಾಯೋಗಿಕ ಆವೃತ್ತಿ

ಕನ್ನಯ್ಯಲಾಲ್ ಕೊಲೆ: ಭಜರಂಗದಳ ಪ್ರತಿಭಟನೆ

ರಾಜಸ್ತಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರನ್ನು ಕೊಲೆ ಮಾಡಿದ ಹಂತಕರನ್ನು ಬಹಿರಂಗವಾಗಿ ನೇಣಿಗೇರಿಸುವಂತೆ ಭಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಾಗಮಂಗಲ ಪಟ್ಟಣದಲ್ಲಿ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ನಾಗಮಂಗಲ ತಾಲೂಕು ಭಜರಂಗದಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮರಿಯಪ್ಪ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜಸ್ಥಾನದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದ್ದು ಕಳೆದ ಆರು ತಿಂಗಳಲ್ಲಿ ಕನ್ನಯ್ಯ ಲಾಲ್ ಸೇರಿದಂತೆ ಸುಮಾರು ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.ಆದ್ದರಿಂದ ರಾಷ್ಟ್ರಪತಿಗಳು ಅಲ್ಲಿನ ಆಡಳಿತವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಒತ್ತಾಯಿಸಿದರು.

ಬಿಜೆಪಿಯ ನೂಪುರ್ ಶರ್ಮ ಅವರು ಪೈಗಂಬರ್ ಅವರ ಬಗ್ಗೆ ಆಡಿದ ಮಾತನ್ನು ಬೆಂಬಲಿಸಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ಕೊಲೆ ಮಾಡಿದ್ದಲ್ಲದೆ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೊಲೆ ಮಾಡವುದಾಗಿ ಧರ್ಮಾಂಧ ಶಕ್ತಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದು ಇದರ ಹಿಂದಿದ್ದು, ಬೆಂಬಲ ನೀಡುತ್ತಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಎನ್ಐಎ ತನಿಖಾ ತಂಡದಿಂದ ಶೀಘ್ರ ವಿಚಾರಣೆ ಮಾಡಬೇಕೆಂದು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಜರಂಗದಳದ ರಮೇಶ, ಶಶಿಕುಮಾರ್, ಗಿರೀಶ್, ಜಯಣ್ಣ,ಸಂತೋಷ್,ಸಿದ್ದರಾಜು, ಚಿಕ್ಕಳ್ಳಿ ಬಾಲು ಅನೇಕ ಮುಖಂಡರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!