Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ದೇವಾಲಯ ಪ್ರವೇಶಕ್ಕೆ ನಿಷೇಧ: ನಾಳೆ ಚೀರನಹಳ್ಳಿಯಲ್ಲಿ ಶಾಂತಿಸಭೆ

ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿಯ ಚೀರನಹಳ್ಳಿ ಗ್ರಾಮದ ಶ್ರೀಬೀರೇಶ್ವರಸ್ವಾಮಿ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಿರುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದ್ದು, ಈ ಸಂಬಂಧ ಮೇ.2ರಂದು ದೇವಾಲಯದ ಆವರಣದಲ್ಲಿ ಬೆಳಿಗ್ಗೆ 11.30 ಗಂಟೆಗೆ ಶಾಂತಿ ಸಭೆಯನ್ನು ಕರೆಯಲಾಗಿದೆ.

ಬೀರೇಶ್ವರ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ ಸಿ ವರ್ಗದ ದೇವಾಲಯವಾಗಿದ್ದು, ಈ  ದೇವಾಲಯಕ್ಕೆ ಪರಿಶಿಷ್ಟ ಜನಾಂಗದವರು ಪ್ರವೇಶ ಮಾಡದಂತೆ ತಡೆಯುವ ಸಲುವಾಗಿ ದೇವಾಲಯದ ಪ್ರವೇಶ ದ್ವಾರದಲ್ಲಿ ಅಡ್ಡಲಾಗಿ ಟೇಬಲ್ ಇಟ್ಟು ಪರಿಶಿಷ್ಟ ಜನಾಂಗದವರೂ ಸೇರಿದಂತೆ ಗ್ರಾಮದ ಇತರೆ ಎಲ್ಲಾ ಜನಾಂಗದವರೂ ದೇವಾಲಯವನ್ನು ಪ್ರವೇಶಿಸದಂತೆ ದೇವಾಲಯದ ಅರ್ಚಕರು ತಡೆ ಮಾಡಿದ್ದಾರೆ, ಹಾಗಾಗಿ ಎಲ್ಲಾ ಭಕ್ತಾಧಿಗಳಿಗೆ ಮುಕ್ತ ಪ್ರವೇಶ ಕಲ್ಪಿಸುವಂತೆ ಕೆಲವು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಈ ಸಂಬಂಧ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ಜಾತಿ, ಜನಾಂಗ ಧರ್ಮ ಲಿಂಗಬೇದವಿಲ್ಲದೆ ದೇವರ ದರ್ಶನಕ್ಕೆ ಸರ್ವರಿಗೂ ಮುಕ್ತ ಪ್ರವೇಶ ಕಲ್ಪಿಸುವ ಸಂಬಂಧ ಮೇ.02-05-2024ನೇ ಗುರುವಾರ ಬೆಳಿಗ್ಗೆ 11:30ಕ್ಕೆ ದೇವಾಲಯದ ಆವರಣದಲ್ಲಿ ಶಾಂತಿಸಭೆಯನ್ನು ಏರ್ಪಡಿಸಿದ್ದು, ಈ ಸಭೆಗೆ ದೇವಾಲಯದ ಅರ್ಚಕರು, ಗ್ರಾಮದ ಮುಖಂಡರು, ಯಜಮಾನರು ಹಾಗೂ ಎಲ್ಲಾ ಕೋಮಿನ ಮುಖ್ಯಸ್ಥರು ಭೆಗೆ ಹಾಜರಾಗುವಂತೆ ಮಂಡ್ಯ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!