Wednesday, September 11, 2024

ಪ್ರಾಯೋಗಿಕ ಆವೃತ್ತಿ

ಕನಗನಮರಡಿ ಕಲ್ಲುಗಣಿಗಾರಿಕೆ ವಿರುದ್ದ ಸಿಡಿದೆದ್ದ ರೈತಾಪಿ ಜನ

ಕನಗನಮರಡಿ ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವ ವಿರುದ್ಧ, 43 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಈವರೆಗೂ ಜಿಲ್ಲಾಡಳಿತ ಬಂದು ನೋಡಿಲ್ಲ ಎಂದು ಡಾ. ಹೆಚ್. ಎನ್ ರವೀಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಜಿಲ್ಲಾಡಳಿತವು ಲೋಕಲ್ ತಹಶೀಲ್ದಾರ್ ಮತ್ತು ಮಧು ಎಂಬ ಜಿಯಾಲಜಿಸ್ಟ್ ರು ಕೊಟ್ಟಿರುವ ವರದಿಯನ್ನು ಇಟ್ಟುಕೊಂಡು ಗಣಿಗಾರಿಕೆಗೆ ಒಪ್ಪಿಗೆ ನೀಡುತ್ತಿರುವುದು ಅಕ್ಷರಸಹ ಅಪರಾಧ ಎಂದು ದೂರಿದರು.

ಯಾವನೋ ಒಬ್ಬ ಅಯೋಗ್ಯ ಮಧು(ಜಿಯಾಲಜಿಸ್ಟ್) ಎಂಬವನು ಕೊಟ್ಟಿರುವ ವರದಿಯ ಆಧಾರದ ಮೇಲೆ ಜಿಲ್ಲೆಯ ಡಿ.ಸಿ ಮತ್ತು ತಹಶೀಲ್ದಾರ್ ಗಳು ಒಪ್ಪಿಗೆ ಕೊಡುವುದಾದರೆ, ಯಾವ ಪುರುಷಾರ್ಥಕ್ಕೆ ಇವರುಗಳು ನಮಗೆ ಯಾಕೆ ಬೇಕು.

ಸುಮಾರು ಅರವತ್ತು ಮನೆಗಳು ಗಣಿಗಾರಿಕೆಯಿಂದಾಗಿ ಬಿರುಕು ಬಿಟ್ಟಿದೆ. ಕನಕನಮರಡಿ ಗ್ರಾಮದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಇದಕ್ಕೆ ಉತ್ತರಿಸುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಾರೆಸ್ಟ್ ಡಿಪಾರ್ಟ್ಮೆಂಟ್ ಮತ್ತು AEE (Assistant Executive Engineer) ಕೊಟ್ಟಿರುವ ವರದಿಗಳು ಸುಳ್ಳೇ?. ಇವರುಗಳು ಹೇಳಿರುವ ಪ್ರಕಾರ ಪರಿಸರಕ್ಕೆ ಮತ್ತು ಜನರಿಗೆ ತೊಂದರೆ ಆಗುತ್ತದೆ. ಮುಖ್ಯವಾಗಿ ವಿ.ಸಿ ನಾಲೆ ಹೊಡೆದು ಹೋಗುತ್ತದೆ ಎಂದು ಹೇಳಿರುವುದು ನಿಮಗೆ ಬೇಡವೇ? ಎಂದು ಪ್ರಶ್ನೆ ಮಾಡಿದರು.

AEE ಅವರ ಪ್ರಕಾರ ಗಣಿಗಾರಿಕೆಯನ್ನು ನಡೆಸುವುದಾದರೆ ಮಂಡ್ಯ, ಮದ್ದೂರು, ಮಳವಳ್ಳಿಯ  1.76.000 ಎಕ್ಕರೆ ರೈತಾಪಿ ಜನರಿಗೆ ನೀರು ಕೊಡಲು ಕಷ್ಟವಾಗುತ್ತದೆ. ಇದರಿಂದ ತುಂಬಾ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದಿರುವುದು ನಿಮಗೆ ಬೇಕಾಗಿಲ್ಲವೆ?  ಎಂದು ಡಿ.ಸಿ ಮತ್ತು ಜಿಲ್ಲಾಡಳಿತಕ್ಕೆ ಚೀಮಾರಿಯಾಕಿದರು.

ಇದನ್ನು ಓದಿ: ಪೊಲೀಸರ ರಕ್ಷಣೆಯಲ್ಲಿ ಕಲ್ಲು ಗಣಿಗಾರಿಕೆ ಪ್ರಾರಂಭ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!