ಕೆ.ಆರ್.ಪೇಟೆ ಪಟ್ಟಣದ ಈಶ್ವರನ ದೇವಸ್ಥಾನದ ಬಳಿ ಹಾಡುಹಗಲೇ ಕುಖ್ಯಾತ ರೌಡಿ ಅರುಣ್ @ ಅಲ್ಲು (38) ಎಂಬಾತನನ್ನು ಐವರು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ರೌಡಿ ಅರುಣ್ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆಯಿಂದ ಗಡಿಪಾರು ಮಾಡಲಾಗಿತ್ತು ಗಡಿಪಾರಾಗಿದ್ದರೂ ಕೆ.ಆರ್.ಪೇಟೆಗೆ ಬಂದಿದ್ದ ರೌಡಿ ಅರುಣ್ ಇಂದು ಬೆಳಿಗ್ಗೆ ಈಶ್ವರನ ದೇವಸ್ಥಾನದಲ್ಲಿ ಇದ್ದಾಗಲೇ ಭೀಕರವಾಗಿ ಮಚ್ಚು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ. ಜೈಲಿನಲ್ಲಿದ್ದಾಗಲೇ ಅಧಿಕಾರಿಯೊಬ್ಬರ ಸಹಾಯ ಪಡೆದು ಮಾರ್ವಾಡಿ ಒಬ್ಬನನ್ನು ಅಪಹರಣ ಮಾಡಿದ್ದ ಅರುಣ್. ಆ ಪ್ರಕರಣದಲ್ಲಿ ಜೈಲು ಅಧಿಕಾರಿಗೂ ಶಿಕ್ಷೆಯಾಗಿತ್ತು.ಉದ್ಯಮಿಗಳು, ರಾಜಕಾರಣಿಗಳಿಂದಲೂ ಹಫ್ತಾ ವಸೂಲಿ ಮಾಡುತ್ತಿದ್ದ ಅರುಣ್ ನನ್ನು
ಜೈಲಿನಿಂದ ಬಂದ ಬಳಿಕ ಪೋಲಿಸರು ಗಡೀಪಾರು ಮಾಡಿದ್ದರು.
ರೌಡಿ ಅರುಣ್ ಕೊಲ್ಲುವುದಕ್ಕೆ ಹಲವು ವರ್ಷಗಳಿಂದಲೂ ಸ್ಕೆಚ್ ಹಾಕಲಾಗಿತ್ತು. ಹಳೆಯ ದ್ವೇಷದಿಂದ ಇಂದು ಐದು ಮಂದಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೆ.ಆರ್.ಪೇಟೆ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು,ಈ ಸಂಬಂದ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.