Friday, September 13, 2024

ಪ್ರಾಯೋಗಿಕ ಆವೃತ್ತಿ

ನ್ಯಾಯಾಂಗದ ಸಾರ್ವಭೌಮತೆ ಪರವಾಗಿ ಧ್ವನಿ ಎತ್ತಲು ಕರೆ

ಅಖಿಲ ಭಾರತ ವಕೀಲರ ಒಕ್ಕೂಟ(ರಿ)AILU ಮಂಡ್ಯ ಜಿಲ್ಲೆ ಇಂದು ಮಂಡ್ಯದಲ್ಲಿ ನ್ಯಾಯಾಂಗದ ಸಾರ್ವಭೌಮತೆ ಪರವಾಗಿ ರಾಜ್ಯದ ಮತ್ತು ದೇಶದ ಜನತೆ ಧ್ವನಿ ಎತ್ತಲು ಕರೆ ನೀಡಲು ಮತ್ತು ಭ್ರಷ್ಟಾಚಾರದ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಸಹಕಾರ ನೀಡದ ಸರ್ಕಾರ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಗುಡುಗಿದ ನ್ಯಾಯಮೂರ್ತಿಗಳನ್ನೇ ವರ್ಗ ಮಾಡಿಸುವ ಬೆದರಿಕೆ ಒಡ್ಡಿದವರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಟಿ.ವಿಶ್ವನಾಥ್ ನ್ಯಾಯಮೂರ್ತಿಗಳು ಭ್ರಷ್ಟ ಬೆಕ್ಕುಗಳಿಗೆ ಗಂಟೆ ಕಟ್ಟಲಿ ರಾಜ್ಯದ ಜನತೆ ಅವರೊಂದಿಗಿದ್ದಾರೆ ಎಂದರು.

ಮುಂದುವರೆದು ಮಾತನಾಡಿದ ಅವರು ನ್ಯಾಯಾಂಗದ ಮೇಲಿನ ಪ್ರಭುತ್ವದ ಸವಾರಿಯನ್ನು ದೇಶದ ಜನ ಪ್ರತಿಭಟಿಸಬೇಕು ಎಂದು ಕರೆಯಿತ್ತರು. ಚಲಮೇಶ್ವರ್ ನಂತರ ನ್ಯಾಯಾಂಗದ ಪ್ರಭುತ್ವ ಕಾಪಾಡಲು ದಿಟ್ಟ ದನಿ ಎತ್ತಿದ ಧೈರ್ಯವಂತ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ರವರು ಎಂದರು. ಅವರು ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ತೋರುತ್ತಿದ್ದ ಶಿಸ್ತು ಕಾರ್ಯತತ್ಪರತೆಯ ಕುರಿತು ಸೇರಿದ್ದ ವಕೀಲರೆಲ್ಲರೂ ಮಾತನಾಡಿದರು.

ಪತ್ರಿಭಟನೆಯಲ್ಲಿ ವಕೀಲರು ಹಿಡಿದಿದ್ದ ಫಲಕಗಳ ಪೈಕಿ ಕೆಲವು ಗಮನ ಸೆಳೆಯುವಂತಿದ್ದವು.ನ್ಯಾಯಾಂಗ ತನ್ನ ಆದೇಶಗಳನ್ನು ಸ್ವತಂತ್ರ ವಾಗಿ ಜಾರಿ ಮಾಡಲು ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಅದರ ಅಧೀನದಲ್ಲಿರುವ ಪ್ರತ್ಯೇಕ ಪೋಲೀಸ್ ಪಡೆ ಅವಶ್ಯಕ ಎಂದು ಒಂದು ಫಲಕ ಹೇಳಿದರೆ, ಮತ್ತೊಂದು ಉನ್ನತ ನ್ಯಾಯಾಂಗದಲ್ಲಿ ಎಲ್ಲ ಜಾತಿ ವರ್ಗ ಧರ್ಮಗಳಿಗೂ ಸಮಾನ ಅವಕಾಶ ಸಿಗಬೇಕು ಎನ್ನುವ ಆಶಯ ವ್ಯಕ್ತಪಡಿಸುತ್ತಿತ್ತು.

ಶ್ರೀಸಾಮಾನ್ಯನ ಉಳಿದ ಒಂದೇ ನಂಬಿಕೆಯ ನೆಲೆ ನ್ಯಾಯಾಂಗ ಎಂದು ಮತ್ತೊಂದು ಫಲಕ ಹೇಳುತ್ತಿತ್ತು. ಹೆಚ್.ಪಿ.ಸಂದೇಶ್ ಒಂದು ಘರ್ಜನೆ ಈ ಪ್ರತಿಭಟನಾ ಕಾರ್ಯಕ್ರಮಕ್ಕೆ ಕಾವು ಒದಗಿಸಿದ್ದು ಎದ್ದು ಕಾಣುತ್ತಿತ್ತು.
ಅಖಿಲ ಭಾರತ ವಕೀಲರ ಒಕ್ಕೂಟ(ರಿ)AILU ರಾಜ್ಯದ ಎಲ್ಲ ವಕೀಲರಿಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ದಾಖಲಿಸಲು ಕರೆ ನೀಡಿತ್ತು.

ಪ್ರತಿಭಟನೆಯಲ್ಲಿ ವಕೀಲರಾದ ಲಕ್ಷ್ಮಣ್ ಚೀರನಹಳ್ಳಿ. ನದೀಮ್, ನಾಗರಾಜ್ ವೇದಮೂರ್ತಿ ಸುದರ್ಶನ್ ಪಲ್ಲವಿ ಅಂಜುಂ ನಳಿನಿ. ನಟೇಶ್ ಪ್ರಕಾಶ್. ಶ್ರೀನಿವಾಸ್, ಪಾಪಣ್ಣ ಮಂಜುಳಾ ಜಯಶಂಕರ್ ಚಿನ್ನೇಗೌಡ ಇತರರು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!