Saturday, June 15, 2024

ಪ್ರಾಯೋಗಿಕ ಆವೃತ್ತಿ

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಕ್ರೀಡೆ ಅಗತ್ಯ

ಮನುಷ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆ ಅಗತ್ಯ ಎಂದು ಪಿ.ಇ.ಟಿ ಸಂಸ್ಥೆಯ ಉಪಾಧ್ಯಕ್ಷ ಎಂ. ಬಿ. ಶ್ರೀಧರ್ ತಿಳಿಸಿದರು.

ಮಂಡ್ಯ ನಗರದ ಪಿ.ಇ.ಟಿ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಬಾಲಕರು ಹಾಗೂ ಬಾಲಕಿಯರ 11 ,13 ಮತ್ತು 15 ವಯೋಮಿತಿಯ ಸಿಂಗಲ್ ಹಾಗೂ ಡಬಲ್ಸ್‌‌ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು‌ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡರೆ ಅವರು ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಅವರ ಆರೋಗ್ಯವೂ ವೃದ್ಧಿಸುತ್ತ್ತದೆ. ಇದಕ್ಕೆ ಪೋಷಕರ ಸಹಕಾರ ಅತ್ಯವಶ್ಯಕ ಎಂದರು.

ಕ್ರೀಡೆ ಜೀವನದ ಒಂದು ಪ್ರಮುಖ ಭಾಗವಾಗಿದೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿಯ ಮೂಲವಾಗಿದೆ. ಇದು ದೇಹದ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ಅಲ್ಲದೆ ಮತ್ತೊಂದೆಡೆ ಮೆದುಳಿನ ಬೆಳವಣಿಗೆಯಲ್ಲಿ ಪ್ರಯೋಜನಕಾರಿಯಾಗಿದೆ. ಕ್ರೀಡೆಗಳನ್ನು ವ್ಯಾಯಾಮದ ಅತ್ಯುತ್ತಮ ಸಾಧನವೆಂದು ಪರಿಗಣಿಸಲಾಗುತ್ತದೆ ಎಂದರು.

ಸಾಧನೆ ಎನ್ನುವುದು ಸುಲಭವಾದ ಮಾತಲ್ಲ. ಅದಕ್ಕೆ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಬೇಕು. ಕ್ರೀಡೆಯಲ್ಲಿ‌ ಸಾಧನೆ ಮಾಡಿದವರನ್ನು ಮಾರ್ಗದರ್ಶಕವಾಗಿ ಇಟ್ಟುಕೊಂಡು ಮುನ್ನಡೆದರೆ ಯಶಸ್ಸಿನ ಫಲ ದೊರೆಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಎಂ. ರಘುರವರ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪಿಇಟಿ ಟ್ರಸ್ಟ್ ನ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ್, ಎಂ.ರಘು ಹಾಗೂ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!