Friday, June 21, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನ ವಿರೋಧಿ ಬಿಜೆಪಿ ಸೋಲಿಸುವುದೇ ಗುರಿ: ಬಿ.ಗೋಪಾಲ್

ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿರುವ ಬಿಜೆಪಿಯನ್ನು ಸೋಲಿಸಲು ಪ.ಜಾತಿ ಮತ್ತು ಪ.ವರ್ಗಗಳು ಒಂದಾಗಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಟ ನಡೆಸಲಿದ್ದೇವೆಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಗೋಪಾಲ್ ತಿಳಿಸಿದರು.

ಮಂಡ್ಯ ನಗರದ ಕನಕ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಮೀಸಲಾತಿ ವ್ಯವಸ್ಥೆಯನ್ನು ಮುಕ್ಕು ಮಾಡಿದೆ. ನರೇಂದ್ರ ಮೋದಿ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದು, ಮೇಲ್ವರ್ಗದ ಜನತೆಗೆ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರತಿಪಕ್ಷಗಳನ್ನು ಸಂಸತ್ತಿನಿಂದ ಹೊರಗಿಟ್ಟು ಮಂಡನೆ ಮಾಡಿ ರಾತ್ರೋರಾತ್ರಿ ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿಗಳ ಬಂಧನ

ಜಾರ್ಖಂಡ್ ಮುಖ್ಯಮಂತ್ರಿ ಆಗಿದ್ದ ಹೇಮಂತ್ ಸೋರೆನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ರನ್ನ ರಾಜಕೀಯ ವಿರೋಧಿ ಎಂಬ ಕಾರಣಕ್ಕೆ ಭ್ರಷ್ಟಾಚಾರದ ಆರೋಪದ ಆಡಿ ಬಂಧಿಸಲಾಗಿದೆ, ಕಾಂಗ್ರೆಸ್ ಸಂಸದ ಡಿ.ಕೆ ಸುರೇಶರನ್ನ ಯಾವ ನ್ಯಾಯಾಲಯವು ದೇಶದ್ರೋಹಿ ಎಂದು ತೀರ್ಪು ನೀಡಿಲ್ಲ. ಆದರೂ ಸಹ ಪ್ರಧಾನ ನರೇಂದ್ರ ಮೋದಿ ದೇಶದ್ರೋಹಿ ಎಂದು ಘೋಷಿಸಿರುವುದು ಅವರ ಘನತೆಗೆ ತಕ್ಕುದ್ದಲ್ಲ ಎಂದರು.

ಉನ್ನತ ಶಿಕ್ಷಣ ವ್ಯಾಸಾಂಗ ಮಾಡುವ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಡೆಹಿಡಿಯಲಾಗಿದೆ. ಕನಿಷ್ಠ ಬೆಂಬಲ ಬೆಲೆ ಕೊಡಲು 5 ಲಕ್ಷ ಕೋಟಿ ನೀಡಲು ಒಪ್ಪದ ಮೋದಿಯವರು ಅಂಬಾನಿ, ಅದಾನಿಯಂತಹ ಬಂಡವಾಳಿಗರಿಗೆ 55 ಲಕ್ಷ ಕೋಟಿ ಹಣ ಮನ್ನಾ ಮಾಡಿದ್ದಾರೆ .ಸರ್ಕಾರಿ ಕೆಲಸ ನೀಡುವ ಬದಲು ಹೊರಗುತ್ತಿಗೆಯಡಿ ನೇಮಕ ಮಾಡಿ ಕೊಳ್ಳಲಾಗುತ್ತಿದೆ.ರೈತರ ಬೆಳೆಗೆ ಸಬ್ಸಿಡಿ ಕಡಿತ ಮಾಡಲಾಗಿದೆ. ಪ.ಜಾತಿ,ವರ್ಗ,ಅಹಿಂದ ಸಮುದಾಯಗಳಿಗೆ ಯಾವ ಸಬ್ಸಿಡಿ ನೀಡುತ್ತಿಲ್ಲ.ಇಂತಹ ರೈತ,ಜನ ವಿರೋಧಿ ಬಿಜೆಪಿ ಪಕ್ಷವನ್ನು ಸೋಲಿಸಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ತಿಳಿಸಿದರು.

136 ಜನ ರೈತರ ಸಾವು

ರೈಲ್ವೆ ಇಲಾಖೆಯಲ್ಲಿ ಖಾಸಗಿಕರಣ ಪದ್ಧತಿ ಜಾರಿ ಮಾಡಿ ಸುಮಾರು ನಾಲ್ಕು ಲಕ್ಷ ಬ್ಯಾಕ್ ಲಾಕ್ ಉದ್ಯೋಗ ಕಡಿತ ಮಾಡಲಾಗಿದೆ. ರಾಜಧಾನಿ ದೆಹಲಿಯ ಗಡಿ ಭಾಗದಲ್ಲಿ ವರ್ಷಗಟ್ಟಲೆ ಹೋರಾಟ ಮಾಡಿದ ರೈತರಲ್ಲಿ 136 ರೈತರು ಸಾವನ್ನಪ್ಪಿದ್ದಾರೆ‌. ಆದರೆ ಇವರಿಗೆ ಕಂಬನಿ ಮಿಡಿಯದ ನರೇಂದ್ರ ಮೋದಿ ಅಪಘಾತದಲ್ಲಿ ಮಡಿದವರಿಗೆ ತಮ್ಮ ಪರಿಚಿತರಿಗೆ ಸಾಂತ್ವನ ಹೇಳಿದ್ದಾರೆ ಎಂದರು.

ಸಂವಿಧಾನ ಬದಲಾವಣೆ ಮಾಡಲಾಗುವುದಿಲ್ಲ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮೊದಲು ಸಂವಿಧಾನ ವಿರೋಧಿ ನಡೆ ಬಿಡಲಿ. ಸಂವಿಧಾನಕ್ಕೆ ತಿದ್ದುಪಡಿ ತರುವ ಅವಕಾಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಮಾಡಲಿ ಎಂದು ಆಗ್ರಹಿಸಿದರು.

ದೇಶದಲ್ಲಿರುವ ಪರಿಶಿಷ್ಟ ಜಾತಿಯ 1606, ಪರಿಶಿಷ್ಟ ವರ್ಗದ 1100 ಹಾಗೂ ಹಿಂದುಳಿದ ವರ್ಗದ 3478 ಜಾತಿಯ ಜನತೆ ಒಗ್ಗೂಡಿ ರೈತರು ,ದಲಿತ, ಕಾರ್ಮಿಕ, ಸಂವಿಧಾನ ವಿರೋಧಿಯಾಗಿರುವ ಬಿಜೆಪಿ ಸರ್ಕಾರವನ್ನು ಸೋಲಿಸಲು ಮುಂದಾಗಿದ್ದು, ಆ ಹಿನ್ನೆಲೆಯಲ್ಲಿ ಅಹಿಂದ ವರ್ಗದ ಜನತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಸುಧಾಮ್ ದಾಸ್ ಮಾತನಾಡಿ, ಬಿಜೆಪಿ ಸರ್ಕಾರದ ವರ್ತನೆ ದಲಿತ ಸಮುದಾಯದ ವಿರುದ್ಧವಿದೆ .ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಅವರನ್ನು ಕರೆಯದೆ ಅವಮಾನ ಮಾಡಿದ್ದಾರೆ. ದೇಶದಲ್ಲಿ ದಲಿತರು ಎಚ್ಚೆತ್ತುಕೊಂಡದ್ದನ್ನು ಅರಿತಿರುವ ಮೋದಿ ಮತ್ತು ಅಮಿತ್ ಷಾ ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ.ಈ ಬಾರಿಯ ಜನತಾ ನ್ಯಾಯಾಲಯದಲ್ಲಿ ಮೋದಿ ಸರ್ಕಾರಕ್ಕೆ ಜನರು ಶಿಕ್ಷೆ ನೀಡಿ ಅಧಿಕಾರದಿಂದ ಕೆಳಗಿಳಿಸಲಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಂಬಣ್ಣ ಶ್ರೀನಿವಾಸ್, ಅಪ್ಪಣ್ಣ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!