ಭಾರತದ ಷೇರುಮಾರುಕಟ್ಟೆಯು ಕಳೆದ ಎರಡು ದಿನ ರಜೆ ಇದ್ದ ಕಾರಣ ಮತ್ತು ಶನಿವಾರ ಭಾನುವಾರವು ಸೇರಿದಂತೆ ನಿರಂತರವಾಗಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಇರಲಿಲ್ಲ. ಈ ರಜೆಯಲ್ಲಿ ಭಾರತದ ಎರಡನೇಯ ಐಟಿ ದಿಗ್ಗಜ ಇನ್ಫೋಸಿಷ್ ಸಾಫ್ಟವೇರ್ ಕಂಪನಿಯ ತ್ರೈಮಾಸಿಕ ವರದಿಯನ್ನು ಬಿಡುಗಡೆಯಾಗಿತು.
ಮಾರುಕಟ್ಟೆಯ ಹೂಡಿಕೆದಾರರು ಮತ್ತು ವಿಶ್ಲೇಷಕರು ನಿರೀಕ್ಷಿಸಿದ ಲಾಭಂಶವು ಬರದ ಕಾರಣ ಸೋಮವಾರ ಆರಂಭದಲ್ಲೆ ಇನ್ಫೋಸಿಸ್ ಕಂಪನಿಯ ಷೇರು ಕೆಳಮುಖವಾಗಿ ಚಲಿಸಿದೆ. ಬುಧವಾರದ ಆಂತ್ಯಕ್ಕೆ ಕಂಪನಿಯ ಷೇರಿನ ಬೆಲೆಯು ರೂ 1748.55 ಕೊನೆಗೊಂಡಿತು. ಕಳೆದ ವರ್ಷಕ್ಕೆ ಇದೇ ತ್ರೈಮಾಸಿಕ್ಕೆ ಹೋಲಿಸಿದರೆ ಭಾರತದ ಎರಡನೇ ಅತಿ ದೊಡ್ಡ ಐಟಿ ಸಂಸ್ಥೆ ಇನ್ಪೀ ಬುಧವಾರ ವರ್ಷದಿಂದ ವರ್ಷಕ್ಕೆ ಶೇಕಡಾ 12 ನಿವ್ವಳ ಲಾಭದಲ್ಲಿ 5686 ಕೋಟಿ ಗಳಿಸಿದ. ಆದರೆ ವಿಶ್ಲೇಷಕರ ಸಮೀಕ್ಷೆಯು 5850 ಕೋಟಿಯ ಲಾಭವನ್ನು ನಿರೀಕ್ಷಿಸಿತ್ತು.
ಈ ನಿರೀಕ್ಷೆಯು ಹುಸಿಯಾದ ಮೇಲೆ ಅಮೆರಿಕಾದ ಎಡಿಆರ್ ನಲ್ಲಿ ಇನ್ಪೀ ಷೇರುಗಳು ಕುಸಿತ ಕಂಡಿತು. ಅದರ ಪರಿಣಾಮವೇ ಸೋಮವಾರದ ಮಾರುಕಟ್ಟೆಯ ಆರಂಭದಲ್ಲೆ ಇನ್ಪೀ ಷೇರು 150 ರೂ ಹೆಚ್ಚು ಕುಸಿತ ಕಂಡು, ಸದ್ಯ 1620 ರೂ ನಲ್ಲಿ ಇನ್ಪೀ ಷೇರುಗಳು ಮಾರುಕಟ್ಟೆಯಲ್ಲಿ ವಹಿವಾಟು ನಡೆಯುತ್ತಿದೆ. ಮಾರುಕಟ್ಟೆಯ ಅಂತ್ಯದ ವೇಳೆ ಯಾವ ಬೆಲೆಗೆ ನಿಲ್ಲಬಹುದು ಎಂದು ಹೂಡಿಕೆದಾರರು ಕಾಯುತ್ತಿದ್ದಾರೆ. ಈ ಫಲಿತಾಂಶದ ಹೊರತಾಗಿಯೂ, ಮೂಲಭೂತವಾಗಿ ಕಂಪನಿಯು ಉತ್ತಮವಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಷೇರುಗಳು ದೊರೆತರೆ, ದೀರ್ಘಕಾಲದ ಅವಧಿಗೆ ಒಳ್ಳೆಯ ಲಾಭಂಶವು ದೊರೆಯುತ್ತದೆ ಎಂಬುದು ಹೂಡಿಕೆದಾರರ ಅಪೇಕ್ಷೆಯಾಗಿದೆ.
ಕಳೆದ ಏಪ್ರಿಲ್ 16ರಂದು ಎಚ್ ಡಿ ಎಫ್ ಸಿ ಬ್ಯಾಂಕಿನ ಷೇರು ತ್ರೈಮಾಸಿಕ ಫಲಿತಾಂಶದ ನಂತರ ಸದ್ಯ ಈಗ 55ರೂ ನಷ್ಟು ಕೆಳಗಡೆ ಬಂದಿದೆ, ಇದು ಕೂಡ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಇದರ ಜೊತೆಗೆ ಟಿಸಿಎಸ್, ರಿಲೆಯನ್ಸ್, ಟೆಕ್ ಮಹಿಂದ್ರಾ, ಅಪೊಲೊ ಹಾಸ್ಪಿಟಲ್, ವಿಪ್ರೋ ಮತ್ತೆ ಕೆಲವು ಐಟಿ ಕಂಪನಿಯ ಷೇರುಗಳ ಕೆಳಮುಖವಾಗಿ ಚಲಿಸಿದೆ. ರಷ್ಯಾ ಮತ್ತು ಉಕ್ರೇನ್ ಯುದ್ದದ ಭೀತಿ,ಡಾಲರ್ ಇಂಡೆಕ್ಸ್ ಮತ್ತು ಕಚ್ಚಾ ತೈಲದ ಬೆಲೆಯ ಏರಿಳಿತದ ಪ್ರಭಾವ ಅಧಿಕವಾಗಿರುವುದರಿಂದ ಮಾರುಕಟ್ಟೆಯಲ್ಲಿ ಸ್ಬಲ್ಪ ಭೀತಿಯ ವಾತಾವರಣವನ್ನು ಹೂಡಿಕೆದಾರರಲ್ಲಿ ಸೃಷ್ಟಿಸಿದೆ.
ಸದ್ಯ ಭಾರತದ ಸಂವೇದಿ ಸೂಚ್ಯಂಕವು 1200 ರಷ್ಟು ಮತ್ತು ನಿಪ್ಟಿ ಸೂಚ್ಯಂಕ 315, ಬ್ಯಾಂಕ್ ನಿಪ್ಟಿ 680 ಕುಸಿದಿದ್ದು, ಈ ಹಂತದಲ್ಲಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಯುತ್ತಿದೆ.