ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಊರು ಮಾರಮ್ಮ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದೆ. ಕಳೆದ ರಾತ್ರಿ ಗ್ರಾಮದ ಹೊರ ವಲಯದಲ್ಲಿರುವ ಊರುಮಾರಮ್ಮ ದೇವಸ್ಥಾನದ ಬಾಗಿಲನ್ನು ಒಡೆದಿರುವ ಕಳ್ಳರು ಎರಡು ಹುಂಡಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ದೇವಸ್ಥಾನದಲ್ಲಿಯೇ ಒಂದು ಹುಂಡಿಯನ್ನು ಒಡೆದಿರುವ ಕಳ್ಳರು ಅದರಲ್ಲಿದ್ದ ನಗನಾಣ್ಯ ದೋಚಿದ್ದಾರೆ. ಮತ್ತೊಂದು ಹುಂಡಿಯನ್ನು ಪಕ್ಕದ ಗದ್ದೆ ಬಯಲಿನಲ್ಲಿ ಬಿಸಾಡಿ ಹೋಗಿದ್ದಾರೆ.
ಊರಮಾರಮ್ಮ ದೇವಸ್ಥಾನದಲ್ಲಿ ಕಳೆದ ಹಲವಾರು ವರ್ಷಗಳಿಂದ ಹಬ್ಬ ನಡೆದಿರಲಿಲ್ಲ. ಕಳೆದ ಏಪ್ರಿಲ್ 27ರಂದು ಊರಹಬ್ಬ ವಿಜೃಂಭಣೆಯಿಂದ ನಡೆದಿತ್ತು.
ಹುಂಡಿಯಲ್ಲಿ ಎರಡರಿಂದ ಮೂರು ಲಕ್ಷ ಹಣ ಸಂಗ್ರಹ ವಾಗಿರಬಹುದು ಎಂದು ಗ್ರಾಮಸ್ಥರು ತಿಳಿಸಿದರು ತಿಳಿಸಿದ್ದಾರೆ. ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದಪ್ಪ,ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ಸುನಿತಾ, ಪೇದೆಗಳಾದ ರಾಜೇಂದ್ರ, ಜೀಶನ್, ಚಿಕ್ಕಯ್ಯ ಉಪಸ್ಥಿತರಿದ್ದು ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಕಳ್ಳರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.