Friday, October 11, 2024

ಪ್ರಾಯೋಗಿಕ ಆವೃತ್ತಿ

ಆರಕ್ಷಕ ಠಾಣೆಗೆ ಮಂಜೂರಾಗಿರುವ ಜಮೀನು ರದ್ದುಮಾಡಲು ಆಗ್ರಹ

ಆರಕ್ಷಕ ಇಲಾಖೆಗೆ ಮಂಜೂರಾಗಿರುವ ಭೂಮಿಯನ್ನು ರದ್ದುಗೊಳಿಸಿ ಸದರಿ ಭೂಮಿಯನ್ನು ದೇವಸ್ಥಾನಕ್ಕೆ ಮಂಜೂರು ಮಾಡುವಂತೆ ಒತ್ತಾಯಿಸಿ ರಾಗಿಮುದ್ದನಹಳ್ಳಿ ಹಾಗೂ ಕೋಡಿಶೆಟ್ಟಿಪುರ ಗ್ರಾಮಸ್ಥರು ಮಂಡ್ಯ ತಹಶೀಲ್ದಾರ್ ಕುಂಇ ಅಹಮ್ಮದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಹಳ್ಳಿ ಹೋಬಳಿಯ ಸಿದ್ದಾಪುರ ಗ್ರಾಮದ ಸರ್ವೇ ನಂ.164/ಪಿ1 ರಲ್ಲಿ ಒಂದು ಎಕರೆ ಸರ್ಕಾರಿ ಜಮೀನನ್ನು 2001-02 ರಲ್ಲಿ ಶ್ರೀರಂಗಪಟ್ಟಣ ಆರಕ್ಷಕ ಇಲಾಖೆಗೆ ಭೂ ಮಂಜೂರು ಮಾಡಲಾಗಿದೆ.ಈ ಜಾಗದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನವಿದ್ದು, ಸುಮಾರು 400-500 ವರ್ಷಗಳ ಇತಿಹಾಸವಿರುವ‌ ಸದರಿ ದೇವಸ್ಥಾನದ ಪಕ್ಕದಲ್ಲಿ ಜನರ ಗಮನಕ್ಕೆ ಬರದಂತೆ ಜೀವನ್ ರಕ್ಷ ಕೇಂದ್ರ ಆರಕ್ಷಕ ಠಾಣೆಗೆ ಮಂಜೂರು ಮಾಡಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ತಾತ-ಮುತ್ತಾತರ ಕಾಲದಿಂದಲೂ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಅನುಭವದಲ್ಲಿದ್ದು ಜಾತ್ರೆಗಳು, ಕೊಂಡ ಬಂಡಿ ಉತ್ಸವ,ಕಾರ್ತಿಕ ಸೋಮವಾರ ವಿಶೇಷ ಪೂಜೆಗಳು, ಅನ್ನ ಸಂತರ್ಪಣೆ,ಪರ ನಡೆಸುತ್ತಾ ಇಲ್ಲಿವರೆಗೂ ನಾವೇ ಅನುಭವದಲ್ಲಿದ್ದೇವೆ. ಸದರಿ ಗ್ರಾಮದ ಒಂದು ಎಕರೆ ಜಮೀನನ್ನು ಆರಕ್ಷಕ ಇಲಾಖೆಗೆ ಮಂಜೂರು ಮಾಡಿರುವುದನ್ನು ರದ್ದುಮಾಡಿ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಮಂಜೂರು ಮಾಡಿಸಿ ಕೊಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ನಿಂಗಣ್ಣ ಚಾರಿ,ಉರಮಾರಕಸಲಗೆರೆ ನಾಗರಾಜು, ಪುರುಷೋತ್ತಮ್, ಶಿವು, ರವಿ, ಶಿವಣ್ಣಗೌಡ,ಮಲ್ಲೇಶ್, ಜಗದೀಶ್, ಸತೀಶ್,ನಿಂಗೇಗೌಡ, ಗವಿ,ಶಶಿ,ಸಂತೋಷ್,ಶಿವಣ್ಣಗೌಡ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!