Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭೆ| ನಿರ್ಣಾಯಕ ಮಹಿಳಾ ಮತದಾರರ ಒಲವು ಯಾರ ಕಡೆಗೆ……?

ಮಂಡ್ಯ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ, ಮತದಾರರು ಯಾರ ಪರವಾಗಿದ್ದಾರೆಂದು ಮತಯಂತ್ರದಲ್ಲಿ ಭದ್ರವಾಗಿದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ನಿರ್ಣಯಕವಾಗಿರುವ ಮಹಿಳಾ ಮತದಾರರು ಯಾರ ಪರವಾಗಿದ್ದಾರೆಂಬುದರ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸಾಂಪ್ರದಾಯಕ ಮತ ಬಂದಿವೆಯಾದರೂ ಮಹಿಳೆಯರು ಯಾರನ್ನು ಬೆಂಬಲಿಸಿದ್ದಾರೆಂಬುದು ಕುತೂಹಲ ಮೂಡಿಸಿದೆ. ಮಂಡ್ಯ ಫಲಿತಾಂಶದ ಬಗ್ಗೆ ಯಾರನ್ನೇ ಕೇಳಿದರೂ ಮಹಿಳೆ ಮತದಾರರು ಬೆಂಬಲಿಸಿದವರೇ ಗೆಲ್ಲುತ್ತಾರೆಂಬ ಉತ್ತರ ಬರುತ್ತಿದೆ.

8,76,112 ಪುರುಷ ಮತದಾರರಿದ್ದು, 9,02,963 ಮಹಿಳಾ ಮತದಾರರಿದ್ದು 168 ಇತರೆ ಮತದಾರರು ಸೇರಿ 17,79,243 ಮತದಾರರಿದ್ದಾರೆ. 7,20,520 ಪುರುಷ, 7,32,503 ಮಹಿಳೆ, 44 ಇತರೆ ಸೇರಿದಂತೆ 14,53,067 ಮತ ಚಲಾವಣೆಯಾಗಿವೆ.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1,27,487 ಮಹಿಳೆಯರ ಪೈಕಿ 97,741 ಜನರು ಮತದಾನ ಮಾಡಿದ್ದಾರೆ. ಮದ್ದೂರಿನಲ್ಲಿ 1,11,443 ಮಹಿಳೆಯರ ಪೈಕಿ 91,702, ಮೇಲುಕೋಟೆಯಲ್ಲಿ 1,03,010 ಮಹಿಳೆಯರಲ್ಲಿ 89,189, ಮಂಡ್ಯದಲ್ಲಿ 1,17,759 ಮಹಿಳೆಯರಲ್ಲಿ 89,859, ಶ್ರೀರಂಗಪಟ್ಟಣದಲ್ಲಿ 1,11,431 ಮಹಿಳೆಯರ ಪೈಕಿ 93,336. ನಾಗಮಂಗಲದಲ್ಲಿ 1,08,783 ಮಹಿಳೆಯರಲ್ಲಿ 91,195, ಕೆ ಆರ್ ಪೇಟೆಯಲ್ಲಿ 1,12,284 ಮಹಿಳೆಯರಲ್ಲಿ 91,112 ಹಾಗೂ ಕೆ.ಆರ್.ನಗರದಲ್ಲಿ 1,10,766 ಮಹಿಳೆಯರ ಪೈಕಿ 88,283 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ, ಈ ಎಲ್ಲಾ ಮಹಿಳೆಯರು ಯಾರಿಗೆ ಹೆಚ್ಚು ಒಲಿದಿದ್ದಾರೆಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುವುದರಲ್ಲಿ ಎರಡು ಮಾತಿಲ್ಲ.

ಕಾಂಗ್ರೆಸ್‌ ನೆಚ್ಚಿಕೊಂಡಿರುವುದು ಯಾರನ್ನ ?

ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ಬೆಂಬಲ ತಮಗೆ ಸಿಕ್ಕಿದೆ ಎನ್ನುವ ಅಚಲ ವಿಶ್ವಾಸದಲ್ಲಿದೆ. ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ ಯೋಜನೆಯಡಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಇದಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಂದು ಲಕ್ಷ ರೂ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಲಾಗಿದೆ. ಈ ಕಾರಣಕ್ಕೆ ಮಹಿಳೆಯರ ಬಲ ನಮಗೆ ಸಿಕ್ಕಿದೆ ಎನ್ನುವುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿದೆ.

ಇದಲ್ಲದೆ ಗ್ಯಾರಂಟಿ ಯೋಜನೆ ಸಂಬಂಧ ಮಹಿಳೆಯರ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವಹೇಳನವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಜಿಲ್ಲಾದ್ಯಂತ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ ಮಾಡಲಾಯಿತು. ಇದು ಕೂಡ ಚುನಾವಣೆಯಲ್ಲಿ ಪ್ಲಸ್ ಆಗಿದೆ ಎನ್ನುವ ಭರವಸೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ.

ಮೈತ್ರಿಯ ಲೆಕ್ಕಾಚಾರವೇನು ? 

ರೈತರ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧದಂತಹ ಮಹತ್ವದ ಯೋಜನೆಯನ್ನು ಎಚ್‌ಡಿಕೆ ಜಾರಿಗೊಳಿಸಿದ್ದರು. ಇವು ನಮ್ಮ ಕೈ ಹಿಡಿಯಲಿವೆ ಎಂದು ಮೈತ್ರಿ ಮುಖಂಡರು ನಂಬಿದ್ದಾರೆ.

ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ ಸೇರಿದಂತೆ ಹಲವು ಸಮುದಾಯ ಮಹಿಳೆಯರ ಬೆಂಬಲ ಮೈತ್ರಿ ಸಿಕ್ಕಿದೆ. ಅಂತೆಯೇ ಶಕ್ತಿ ಯೋಜನೆಯ ಅದ್ವಾನದಿಂದ ಬಸ್ ಸಂಚಾರ ದುಸ್ತರವಾಗಿರುವುದು, ಮನೆಗೆ ಎರಡು ಸಾವಿರ ರೂ ಕೊಟ್ಟು ಮತ್ತೊಂದೆಡೆ ಆರ್‌ಟಿಸಿ, ಛಾಪಾ ಕಾಗದ ಸೇರಿದಂತೆ ಕೆಲ ಅಗತ್ಯ ದಾಖಲೆಗಳ ಬೆಲೆ ಏರಿಕೆ ಮಾಡಿ ವಸೂಲಿ ಮಾಡಲಾಗುತ್ತಿದೆ ಎಂದು ಜನತೆ ನಂಬಿದ್ದಾರೆ, ಆದ್ದರಿಂದ ತಮಗೆ ಬೆಂಬಲ ಸಿಕ್ಕಿದೆ ಎಂದು ಮೈತ್ರಿ ನಾಯಕರ ಲೆಕ್ಕಾಚಾರವಾಗಿದೆ, ಅಂತಿಮವಾಗಿ ಜೂ.4ರಂದು ಫಲಿತಾಂಶ ಹೊರ ಬೀಳಲಿದ್ದು, ಯಾರು ಯಾರ ಪರವಾಗಿದ್ಧಾರೆಂದು ಸಾಬೀತಾಗ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!