ಕೆ. ಆರ್. ಪೇಟೆಯ ಕೈಗೋನಹಳ್ಳಿಯಲ್ಲಿ ನಡೆದ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಹಾಗೂ ರಂಗದ ಹಬ್ಬದಲ್ಲಿ ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಪಾಲ್ಗೊಂಡಿದ್ದರು.
ಕೈಗೋನಹಳ್ಳಿಯು ಸಚಿವ ಡಾ.ನಾರಾಯಣಗೌಡ ಅವರ ಸ್ವಗ್ರಾಮವಾಗಿದ್ದು, ಪ್ರತಿವರ್ಷ ತಪ್ಪದೇ ವೀರಭದ್ರೇಶ್ವರ ಸ್ವಾಮಿ ಉತ್ಸವದಲ್ಲಿ ಪಾಲ್ಗೊಂಡು, ರಂಗದ ಹಬ್ಬದಲ್ಲಿ ಗ್ರಾಮಸ್ಥರೊಂದಿಗೆ ರಂಗದ ಕುಣಿತದಲ್ಲಿ ಭಾಗಿಯಾಗುತ್ತಾರೆ.