Thursday, June 13, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಏ.14ರಂದು ‘ಶ್ರಮಿಕ ಜನರ ಸ್ವಾಭಿಮಾನಿ ಗೆಲುವಿನ ಸಮಾವೇಶ’

ಮಂಡ್ಯ ಜಿಲ್ಲಾ ಶ್ರಮಿಕರನಗರ ನಿವಾಸಿಗಳ ಒಕ್ಕೂಟದ ವತಿಯಿಂದ ಶ್ರಮಿಕ ಜನರ ಸ್ವಾಭಿಮಾನಿ ಗೆಲುವಿನ ಸಮಾವೇಶವನ್ನು ಏ.14ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯನಗರ ರೈತಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಯಿಂದ ಮಂಡ್ಯನಗರದ ಕಾಳಿಕಾಂಬ ಶ್ರಮಿಕ ನಗರದ ಆವರಣದಿಂದ ರೈತ ಸಭಾಂಗಣದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.  ಮಂಡ್ಯ ಜಿಲ್ಲೆಯ ಬಹುತೇಕ ಎಲ್ಲ ಶ್ರಮಿಕನಗರಗಳಲ್ಲಿ ನಿರಂತರ ಹೋರಾಟ ನಡೆಸುವ ಮೂಲಕ ಬಹುತೇಕ ಮೂಲ ಸೌಕರ್ಯಗಳನ್ನು ದಕ್ಕಿಸಿಕೊಂಡಿದ್ದೇವೆ, ಈ ಹಿನ್ನೆಲೆಯಲ್ಲಿ ಶ್ರಮಿಕ ಜನರ ಸ್ವಾಭಿಮಾನಿ ಗೆಲುವಿನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಪ್ರಗತಿಪರ ಚಿಂತಕ ಎಂ.ವಿ. ಕೃಷ್ಣ ಕಾರ್ಯಕ್ರಮದ ಮೆರವಣೆಗೆ ಉದ್ಘಾಟನೆಯನ್ನುನಗಾರಿ ಬಾರಿಸುವ ಮೂಲಕ ಉದ್ಘಾಟಿಸಲಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಅಖಿಲ ಭಾರತ ವಕೀಲರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಬಿ.ಬಿ. ವಿಶ್ವನಾಥ್‌ ಅಧ್ಯಕ್ಷತೆ ವಹಿಸುವರು. ಹಿರಿಯ ಬರಹಗಾರರು ಮತ್ತು ಸಾಮಾಜಿಕ ಚಿಂತಕ ರಾದ ವಿಜಯಮ್ಮ ಮುಖ್ಯ ಭಾಷಣ ಮಾಡುವರು. ಪ್ರಗತಿಪರ ಚಿಂತಕ ಡಾ.ಹೆಚ್.ವಿ.ವಾಸು ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ವಿಚಾರ ಮಂಡನೆ ಮಾಡುವರು ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಕುಮಾರ್‌, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಜಿಲ್ಲಾ ಪೋಲಿಸ್, ವರಿಷ್ಠಾಧಿಕಾರಿ ಎನ್. ಯತೀಶ್‌ ಹಾಗು ಮಂಡ್ಯ ನಗರಸಭೆ ಆಯುಕ್ತ ಮಂಜುನಾಥ್‌ ಭಾಗವಹಿಸುವರು. ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಪ್ರಾಸ್ತಾವಿಕ ನುಡಿ ನುಡಿಯುವರು. ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ, ಪೂರ್ಣಿಮ ಜಿ ಕಾರ್ಯಕ್ರಮ ನಿರ್ವಹಣೆ ಮಾಡುವರು ಎಂದರು.

ಪತ್ರಕರ್ತ, ಸಾಮಾಜಿಕ ಹೋರಾಟಗಾರ ನಾಗೇಶ್, ಮಹಿಳಾ ಮುನ್ನಡೆಯ ಕಮಲ, ಕರ್ನಾಟಕ ಜನಶಕ್ತಿ, ಜಿಲ್ಲಾಧ್ಯಕ್ಷ ಕೃಷ್ಣ ಪ್ರಕಾಶ್, ಕರ್ನಾಟಕ ಜನಶಕ್ತಿ ಮರಿಯಪ್ಪ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಅಧ್ಯಕ್ಷ ಪ್ರಕಾಶ್‌, ಬಳ್ಳಾರಿಯ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಅಧ್ಯಕ್ಷ ಕರಿಯಪ್ಪ ಗುಡಿಮನಿ, ಕರ್ನಾಟಕ ಜನಶಕ್ತಿಯ ಸಂತೋಷ್‌, ಜಗದೀಶ್ ನಗರಗೆರೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಶ್ರೀಮತಿ ಅಂಜಲಿ ಅವರು ಸ್ವಾಭಿಮಾನಿ ಸಂದೇಶ ನೀಡುವರು ಎಂದರು.

ಅಂದು ನಮ್ಮೊಂದಿಗೆ ದಸಂಸ ಗುರುಪ್ರಸಾದ್ ಕೆರಗೋಡು,ಕೆಂಪೂಗೌಡ ರಾಜ್ಯ ರೈತ ಸಂಘ, ಸುನಂದಾ ಜಯರಾಂ ರಾಜ್ಯ ರೈತ ಸಂಘ, ವೈರಮುಡಿ ನಿತ್ಯಸ್ನೇಹಿ ಬಳಗ, ಮಂಜುಳ ಅರುಣೋದಯ ಕಲಾತಂಡ, ಶಂಭುನಳ್ಳಿ ಸುರೇಶ್ ರಾಜ್ಯ ರೈತಸಂಘ, ಲಂಕೇಶ್‌ ನೆಲದನಿ ಬಳಗ, ಲತಾಶಂಕರ್‌ ರಾಜ್ಯ ರೈತಸಂಘ. ಜಿ.ಟಿ. ವೀರಪ್ಪ ಪ್ರಗತಿಪರ ಚಿಂತಕರು, ಜನಾರ್ಧನ್‌ ವಿಮೋಚನಾ ಮಹಿಳಾ ಸಂಘಟನೆ, ಸಿ. ಕುಮಾರಿ ಸಿ.ಐ.ಟಿ.ಯು. ರಾಧಮಣಿ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ, ವೆಂಕಟಗಿರಿಯಯ್ಯ ದಸಂಸ, ರಮಾನಂದ್‌ ದಸಂಸ  ಹಾಗೂ ರೈತ, ದಲಿತ, ಕಾರ್ಮಿಕ, ಮಹಿಳಾ ಹಾಗೂ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಸಾಮಾಜಿಕ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಗೋ‍ಷ್ಠಿಯಲ್ಲಿ ಕರ್ನಾಟಕ ಜನಶಕ್ತಿಯ ಜಿಲ್ಲಾಧ್ಯಕ್ಷ ಕೃಷ್ಣಪ್ರಕಾಶ್, ಮುಖಂಡರಾದ ಸಂತೋಷ್, ಪೂರ್ಣಿಮ, ಮಹಿಳಾ ಮುನ್ನಡೆಯ ಶಿಲ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!