Tuesday, June 25, 2024

ಪ್ರಾಯೋಗಿಕ ಆವೃತ್ತಿ

ಮನುಷ್ಯತ್ವ ಬೇಕೋ-ಮನುವಾದ ಬೇಕೋ? ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನಿಮಗೆ ಮನುಷ್ಯತ್ವಬೇಕು ಎನ್ನುವುದಾದರೆ, ಎಲ್ಲ ಧರ್ಮ-ಜಾತಿಯವರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗಬೇಕು ಎನ್ನುವುದಾದರೆ, ಕಾಂಗ್ರೆಸ್ ಆಯ್ಕೆ ಮಾಡಿ.

ಸಮಾಜದಲ್ಲಿ ಬೆಂಕಿ ಹಚ್ಚುವ, ದ್ವೇಷ ಬಿತ್ತುವ, ಕೋಮುವಾದ ಬೆಳೆಸಬೇಕು ಎನ್ನುವುದಾದರೆ ಬಿಜೆಪಿ ಆಯ್ಕೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.

ನಗರದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಯವರಿಗೆ ಜೆಡಿಎಸ್‌ನವರು ಬೆಂಬಲವಾಗಿ ನಿಂತಿದ್ದಾರೆ.

ಅಂತಹವರಿಗೆ ಬೆಂಬಲ ನೀಡಬೇಕೇ ಎನ್ನುವುದನ್ನು ಚಿಂತನೆ ಮಾಡಿ ಎಂದು ಹೇಳಿದರು.

ನಿಮಗೆ ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ನಿಮ್ಮ ಮುಂದೆ ಬಂದು ಕಣ್ಣೀರು-ಗಿಣ್ಣೀರು ಹಾಕಿಕೊಂಡು ಬರುವವರನ್ನು ನಂಬಬೇಡಿ ಎಂದು ಕುಮಾರಸ್ವಾಮಿ ಹೆಸರೇಳದೆ ವ್ಯಂಗ್ಯವಾಡಿದರು.

ರಾಜಕೀಯದವರಿಗೆ ಯಾಕೆ ಕಣ್ಣೀರು ಬರುತ್ತದೆ. ರಾಜಕೀಯ ನಮ್ಮಪ್ಪನ ಮನೆಯ ಆಸ್ತಿಯೇ ಅಯ್ಯೋ ಬಿದ್ದೋಯ್ತು ಎಂದು ಅಳುವುದಕ್ಕೆ. ಜನ ಆಶೀರ್ವಾದ ಮಾಡಿದರೆ ಆಡಳಿತದಲ್ಲಿರುತ್ತೇವೆ.

ಇಲ್ಲವಾದರೆ ವಿರೋಧ ಪಕ್ಷದಲ್ಲಿರುತ್ತೇವೆ. ದಯಮಾಡಿ ಕಣ್ಣೀರಿಗೆ ಯಾರೂ ಬಲಿಯಾಗಬೇಡಿ ಎಂದು ಹೇಳಿದರು.

ರಾಜ್ಯವನ್ನು ಭ್ರಷ್ಟಾಚಾರ ಮುಕ್ತಮಾಡಲು ನಮ್ಮ ಕಾರ್ಯಕರ್ತರು ಮುಂದಾಗಬೇಕು, ಜನತೆ ಇದಕ್ಕೆ ಸಹಕಾರ ನೀಡಬೇಕು. ಸದನದಲ್ಲಿ ಜನರ ಹಿತಕ್ಕಾಗಿ ನಾವು ಮತ್ತಷ್ಟು ಹೋರಾಟ ಮಾಡಲು ಸಿದ್ಧರಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!