Thursday, November 19, 2026

ಪ್ರಾಯೋಗಿಕ ಆವೃತ್ತಿ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕೆ ಅನುಕೂಲವಾಗಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ಅವರು ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್ ನೀಡುವ ಮೂಲಕ ಶುಭ ಹಾರೈಸಿದ್ದಾರೆ.

ಬಾದಾಮಿಯ ಶಿವಾನಂದ ಕೆರೂರ್ ಅವರು ಪೋಲಿಯೋ ಪೀಡಿತರಾಗಿದ್ದು, ಬಿ.ಕಾಂ.ಪದವೀಧರರಾಗಿದ್ದಾರೆ. ಅಂಗವಿಕಲನಾಗಿ ಸಣ್ಣ ಜೆರಾಕ್ಸ್ ಅಂಗಡಿಯನ್ನು ನಡೆಸುತ್ತಿದ್ದ ಈತನ ಛಲ,ಬದುಕು ಕಟ್ಟಿಕೊಳ್ಳುವ ಆತ್ಮವಿಶ್ವಾಸ ಕಂಡ ಶಿವಣ್ಣನವರು ಆತನನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ರಾಮ ಮನೋಹರ್ ಲೋಹಿಯಾ ಫೌಂಡೇಷನ್‌ ವತಿಯಿಂದ ಕಂಪ್ಯೂಟರ್ ನೀಡಿ ಶುಭ ಹಾರೈಸಿದ್ದಾರೆ.

ಹಾಗೆಯೇ ಪ್ರತಿಭಾವಂತ,ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸದಾ ಸ್ಪಂದಿಸುವ ಶಿವಣ್ಣನವರು ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿದ್ದಾರೆ.ಅದರಂತೆ ಮೈಸೂರಿನ ಎನ್ ಐ ಇ ಇಂಜಿನಿಯರಿಂಗ್ ಕಾಲೇಜಿನ ಪ್ರೇರಣ,ಜಿಎಂಐಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಜ್ವಲ್ ಹಾಗೂ ಸಪ್ತಗಿರಿ ಕಾಲೇಜಿನ ಐಶ್ವರ್ಯ ಅವರಿಗೆ ಲ್ಯಾಪ್‌ಟಾಪ್ ನೀಡುವ ಮೂಲಕ ಅವರ ಶೈಕ್ಷಣಿಕ ಅಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ನೆಚ್ಚಿನ ಸುದ್ದಿಗಳ ಓದಿಗಾಗಿ ನಮ್ಮ WhatsApp ಗ್ರೂಪ್ ಸೇರಲು 👇 ಈ ಲಿಂಕ್ ಮೇಲೆ ಸೇರಿರಿ.

https://chat.whatsapp.com/KWv6TFFjpipBRKbqUKkHKJ

ನಮ್ಮ ನುಡಿ ಕರ್ನಾಟಕ YouTube ಚಾನಲ್ ವೀಡಿಯೋ ಗಳನ್ನು ನೋಡಲು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ..

https://bit.ly/3DEHvvv

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ