ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಯಡವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ ಅವರ ಶಿಶ್ನದ ಮುಂದೊಗಲು ಕತ್ತರಿಸಿ (ಖತ್ನಾ) ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ 11 ಮಂದಿ ವಿರುದ್ಧ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದರೆಂದು ಯಡವನಹಳ್ಳಿ ಶ್ರೀಧರ್ ಹುಬ್ಬಳ್ಳಿ ನವನಗರದ ಪೋಲಿಸ್ ಠಾಣೆಯಲ್ಲಿ ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೇಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನಾ ಪಾಷಾ, ಸಯ್ಯದ್ ದಸ್ತಗಿ, ಮಹ್ಮದ್ ಇಕ್ವಾಲ್, ರಫೀಕ್, ಶಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ದೂರು ನೀಡಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ
ಹಣಕಾಸಿನ ತೊಂದರೆ ಹಿನ್ನೆಲೆಯಲ್ಲಿ ಶ್ರೀಧರ್ ಸಿಲುಕಿಕೊಂಡಿದ್ದ.ಇದನ್ನು ಅರಿತ ಆತನ ಮುಸ್ಲಿಂ ಸ್ನೇಹಿತರು ಹಣಕಾಸು ಕೊಡಿಸುವುದಾಗಿ ಕಳೆದ ಮೇ ತಿಂಗಳಲ್ಲಿ ಶ್ರೀಧರ್ ಅವರನ್ನು ಬೆಂಗಳೂರಿಗೆ ಕರೆದೊಯ್ದ ಆರೋಪಿಗಳು, ಅಲ್ಲಿನ ಬನಶಂಕರಿಯ ಮಸೀದಿಯೊಂದರಲ್ಲಿ ಬಲವಂತವಾಗಿ ಬಂಧಿಸಿಟ್ಟಿದ್ದರು. ನಂತರ ಅವರಿಗೆ ಇಸ್ಲಾಂ ಬಗ್ಗೆ ನಂಬಿಕೆ ಬರುವಂತೆ ಮಾಡಿ, ‘ಖತ್ನಾ’ ಮಾಡಿದ್ದಾರೆ. ದನದ ಮಾಂಸ, ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಲ್ಲದೆ, ಮತಾಂತರದ ಬಗ್ಗೆ ಬಾಂಡ್ ಪೇಪರ್ನಲ್ಲಿ ಸಹಿ ಪಡೆದಿದ್ದಾರೆ. ಅಲ್ಲಿಂದ ತಿರುಪತಿಗೆ ಕರೆದೊಯ್ದು, ಇಸ್ಲಾಂ ಧರ್ಮದ ಪ್ರಾರ್ಥನೆ ಹಾಗೂ ಇತರ ಪದ್ಧತಿಗಳ ಕುರಿತು ತರಬೇತಿ ನೀಡಿದ್ದಾರೆ.
ಪ್ರತಿವರ್ಷ ಮೂವರನ್ನು ಇಸ್ಲಾಂಗೆ ಮತಾಂತರ ಮಾಡಬೇಕೆಂದು ಆರೋಪಿಗಳು ಶ್ರೀಧರ್ ಅವರಿಗೆ ಬೆದರಿಸಿದ್ದಾರೆ. ಅವರ ಪಿಸ್ತೂಲ್ ಹಿಡಿಸಿ, ಕೈಯ್ಯಲ್ಲಿ ಫೋಟೊ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಭಯೋತ್ಪಾದಕನೆಂದು ಬಿಂಬಿಸುವುದಾಗಿ ಹೆದರಿಸಿದ್ದಾರೆ. ಅವರ ಬ್ಯಾಂಕ್ ಖಾತೆಗೂ 35 ಸಾವಿರ ವರ್ಗಾ ಯಿಸಿ, ತಾವು ಹೇಳಿದಂತೆ ಕೇಳಬೇಕು ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಶ್ರೀಧರ್ ಅವರು ಜಾಲತಾಣದಲ್ಲಿ ಸಾಮಾಜಿಕ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಸೆ. 21ರಂದು ಹುಬ್ಬಳ್ಳಿಯ ಬೈರಿದೇವರ ಕೊಪ್ಪಕ್ಕೆ ಬಂದಾಗ, ಅಪರಿಚಿತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿದ್ದಾರೆ.
ಇಂದು ದೇಶಾದ್ಯಂತ ಹಿಂದೂ-ಮುಸಲ್ಮಾನರ ನಡುವೆ ಧರ್ಮದ ಕಾರಣಕ್ಕೆ ಕಂದಕ ನಿರ್ಮಾಣವಾಗಿರುವ ಹೊತ್ತಿನಲ್ಲಿ ಹಿಂದೂ ಯುವಕನಿಗೆ ಖತ್ನಾಂ ಮಾಡಿರುವ 11 ಮಂದಿ ಮುಸಲ್ಮಾನರ ಪ್ರಕರಣದ ಹಿಂದಿರುವ ನಿಜ ಸತ್ಯವನ್ನು ಪೋಲೀಸರು ಬಯಲುಮಾಡಬೇಕಿದೆ.




