Wednesday, November 18, 2026

ಪ್ರಾಯೋಗಿಕ ಆವೃತ್ತಿ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎಂ.ಶ್ರೀನಿವಾಸ್ ಗುದ್ದಲಿಪೂಜೆ

ಮಂಡ್ಯ ವಿಧಾನಸಭಾ ಕ್ಷೇತ್ರದ ಕೋಣನಹಳ್ಳಿ, ಪಣಕನಹಳ್ಳಿ ಹಾಗೂ ತಂಡಸನಹಳ್ಳಿ ಗ್ರಾಮಗಳಲ್ಲಿ 45 ಲಕ್ಷ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಶ್ರೀನಿವಾಸ್‌ ಗುದ್ದಲಿಪೂಜೆ ನೆರವೇರಿಸಿದರು.

ಕೋಣನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ಪಣಕನಹಳ್ಳಿ ಗ್ರಾಮದಲ್ಲಿ 15 ಲಕ್ಷ ರೂ. ಹಾಗೂ ತಂಡಸನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಕಾಮಗಾರಿ ನಡೆಯುವಾಗ ಯುವಕರು ಗುಣಮಟ್ಟದ ಕಾಮಗಾರಿ ನಡೆಯುತ್ತಿದೆಯೇ ಎಂದು ಗಮನ ಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಕೋಣನಹಳ್ಳಿ ಮಂಜು, ಮುಖಂಡ ಕುಮಾರ್, ವಕೀಲ ಶಶಿಧರ್, ಬಸವರಾಜು, ಗ್ರಾ.ಪಂ.ಸದಸ್ಯರಾದ ಪಿ.ಜೆ.ಲೋಕೇಶ್, ಪಿ.ಎಂ.ಆನಂದ, ಪುಟ್ಟರಾಜು, ತಾ.ಪಂ.ಮಾಜಿ ಸದಸ್ಯ ಶಂಕರಗೌಡ, ಟಿ.ಎಸ್.ರೇವಣ್ಣ, ನವೀನ್, ಗ್ರಾ.ಪಂ. ಸದಸ್ಯರಾದ ನಿರ್ಮಲ ಬೋರೇಗೌಡ, ಜಯಮ್ಮ, ಎಇಇ ಶಂಕರ್, ಗುತ್ತಿಗೆದಾರ ರವೀಂದ್ರ ಸೇರಿದಂತೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ